ಕೆ.ಆರ್.ಪೇಟೆ: ಗಂಡ, ಹೆಂಡತಿ ಇಬ್ಬರೂ ಒಂದೇ ದಿನ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಸಂಭವಿಸಿದೆ.
ಬೂಕನಕೆರೆ ಗ್ರಾಮದ ಗೌರಮ್ಮ ಎಂಬುವವರು ಭಾನುವಾರ ನಿಧನ ಹೊಂದಿದ್ದರು. ಗೌರಮ್ಮ ಅವರ ಅಂತ್ಯಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವಾಗ ಅವರ ಪತಿ ಲಿಂಗರಾಜನಾಯಕ ಅವರು ಪತ್ನಿಯ ಶವಕ್ಕೆ ಪೂಜೆ ಸಲ್ಲಿಸುವ ವೇಳೆ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:-ಮೈಸೂರು| ಬಾರ್ ಬಿಲ್ ಕಟ್ಟುವ ವಿಚಾರಕ್ಕೆ ಗಲಾಟೆ: ಯುವಕನಿಗೆ ಚಾಕು ಇರಿತ
ಕಳೆದ ೪೬ ವರ್ಷಗಳ ಹಿಂದೆ ಗೌರಮ್ಮ ಮತ್ತು ಲಿಂಗರಾಜನಾಯಕ ಅವರು ವಿವಾಹವಾಗಿದ್ದರು. ಕಳೆದ ೪೬ ವರ್ಷಗಳಿಂದಲೂ ಜೊತೆಯಲ್ಲಿ ಜೀವನ ನಡೆಸಿದ್ದ ದಂಪತಿಗಳಿಬ್ಬರೂ ಎಲ್ಲಿಗೆ ಹೋದರೂ ಜೊತೆಯಲ್ಲಿಯೇ ಹೋಗಿ ಬರುತ್ತಿದ್ದರು. ಈ ದಂಪತಿಗೆ ಜಗದೀಶ್ ಮತ್ತು ವಿಜಯ್ ಕುಮಾರ್ ಎಂಬ ಇಬ್ಬರು ಪುತ್ರರಿದ್ದಾರೆ.





