Mysore
26
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಜೆಡಿಎಸ್‌ನಲ್ಲೇ ಇದ್ದೀನಿ, ಪಕ್ಷದಿಂದಲೇ ಸ್ಪರ್ಧೆ : ಜಿ.ಟಿ.ದೇವೇಗೌಡ ಸ್ಪಷ್ಟನೆ

ಮೈಸೂರು : ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದಲೇ ನನ್ನ ಸ್ಪರ್ಧೆ, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಮಾತನಾಡಿರುವ ಶಾಸಕ ಜಿ.ಟಿ ದೇವೇಗೌಡ, ಜೆಡಿಎಸ್ ಟಿಕೆಟ್ ಕೊಡದಿದ್ದರೇ ನೀವು ಹೇಳಿದಂತೆ ಕೇಳುತ್ತೇನೆ ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಇಲ್ಲೇ ಇರುತ್ತೇನೆ ಜೆಡಿಎಸ್ ಟಿಕೆಟ್ ಕೊಡದಿದ್ದರೆ ಕ್ಷೇತ್ರದ ಜನ ಏನು ಹೇಳುತ್ತಾರೋ ಅದಕ್ಕೆ ಸಿದ್ದ ಎಂದು ಕ್ಷೇತ್ರದ ಜನರನ್ನುದ್ದೇಶಿಸಿ ಹೇಳಿದರು.

ನಾನು ಬೆಳೆಸಿದ್ದವರು, ದುಡ್ಡು ಮಾಡಿದವರು ನನ್ನ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ಇದು ಇವತ್ತಿನದ್ದಲ್ಲ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿಮ್ಮ ಜೊತೆ ನಾನು ಇರುತ್ತೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಜಿ.ಟಿ ದೇವೇಗೌಡರು ಕ್ಷೇತ್ರದ ಜನರಿಗೆ ತಿಳಿಸಿದರು.

ಈಗಾಗಲೇ ಜೆಡಿಎಸ್‌ನ ಎಲ್ಲಾ ಸಭೆಗಳಿಗೂ ಜಿಟಿಡಿ ಗೈರಾಗಿದ್ದು, ಜೆಡಿಎಸ್ ವರಿಷ್ಠರು ಕೂಡ ಜಿಟಿಡಿ ಬಿಟ್ಟು ಮುಂದೆ ಹೋಗುವ ಮಾತಾಡಿದ್ದಾರೆ. ಪಕ್ಷದ ಎಲ್ಲಾ ಸಭೆ ಸಮಾರಂಭ, ಫ್ಲೆಕ್ಸ್‌ಗಳಲ್ಲೂ ಜಿಟಿಡಿ ಫೋಟೋಗೆ ಕೊಕ್ ನೀಡಲಾಗಿದೆ. ಈ ಹಂತದಲ್ಲಿ ಜಿಟಿಡಿ ಪ್ರಯೋಗಿಸಿರುವ ಭಾವನಾತ್ಮಕ ದಾಳ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Tags:
error: Content is protected !!