Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಸರ್ಕಾರ ಸತ್ತು ಹೋಗಿದೆಯೇ? ಬದುಕಿದೆಯಾ?: ಅಶ್ವಥ್‌ ನಾರಾಯಣ್‌ ಗುಡುಗು

ಮಂಡ್ಯ: ನಾವು ಕೆಲಸವಿಲ್ಲದವರು ನಿಜ. ಆದರೆ ಕೆಲಸವಿರುವ ನೀವು ಏನು ಮಾಡುತ್ತಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಅಶ್ವಥ್‌ ನಾರಾಯಣ್‌ ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರಿಗೆ ಕೆಲಸವಿಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಇಂದು ಮಾತನಾಡಿದ ಅವರು, ಗಲಭೆಗಳನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ ಹಾಗೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದನ್ನು ಖಂಡಿಸಿದ್ದಕ್ಕೆ ಕಾಂಗ್ರೆಸ್‌ ನಾಯಕರು ನಮ್ಮನ್ನು ಕೆಲಸವಿಲ್ಲದವರು ಎನ್ನುತ್ತಿದ್ದಾರೆ. ನಮಗೆ ಕೆಲಸವಿಲ್ಲ ನಿಜ. ಆದರೆ ಕೆಲಸವಿರುವ ನೀವು ಏನು ಮಾಡುತ್ತಿದ್ದೀರಾ? ಮಸಾಲೆ ದೋಸೆ ತಿಂತಿದ್ದೀರಾ? ಎಂದು ಪ್ರಶ್ನೆ ಮಾಡಿದರು.

ಕೆಲಸವಿರುವ ಸರ್ಕಾರದ ನಾಯಕರು ಎಲ್ಲಿಲ್ಲಿಗೆ ಹೋಗಿದ್ದಾರೆ? ಒಬ್ಬನೇ ಒಬ್ಬ ಸಚಿವನಾಗಲಿ, ಶಾಸಕನಾಗಲಿ ಮದ್ದೂರಿಗೆ ಬಂದು ಜನರ ಸಂಕಷ್ಟ ಆಲಿಸಿಲಲ್.‌ ಈ ಸರ್ಕಾರ ಸತ್ತು ಹೋಗಿದೆಯಾ? ಬದುಕಿದೆಯಾ? ಎಂದು ಕಿಡಿಕಾರಿದರು.

ಇನ್ನು ಬಹುಮತದಿಂದ ಜನರು ನಿಮ್ಮ ಸರ್ಕಾರ ತಂದು ನಿಮಗೆ ಆಡಳಿತ ಕೊಟ್ಟಿದ್ದಾರೆ. ಅದಕ್ಕಾಗಿಯಾದರೂ ಗೌರವಿಸಿ ಚೆನ್ನಾಗಿ ಆಡಳಿತ ನಡೆಸಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಅದನ್ನು ಮೊದಲು ಸರಿಪಡಿಸಿ. ಕೆಲಸವಿರುವ ನೀವು ಏನಾದರೂ ಮಾಡಿ ಎಂದು ರಾಜ್ಯ ಸರ್ಕಾರ ಹಾಗೂ ಸಿಎಂ, ಡಿಸಿಎಂ ವಿರುದ್ಧ ಗುಡುಗಿದರು.

Tags:
error: Content is protected !!