Mysore
27
scattered clouds
Light
Dark

ಪ್ರತಿಯೊಬ್ಬರ ಸಣ್ಣ ಹೆಜ್ಜೆಗಳ ದೊಡ್ಡ ಪರಿಣಾಮವೇ Plant4Mother : ಇಒ ಹೆಚ್.ಜಿ.ಶ್ರೀನಿವಾಸ್

ಮಂಡ್ಯ: ಪ್ರತಿಯೊಬ್ಬ ನಾಗರಿಕರು ಗಿಡ-ಮರಗಳನ್ನು ಬೆಳೆಸಿ ಉಳಿಸುವ ಮೂಲಕ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಹೊಂದಿದ್ದು ಅದರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಬೆಳಸಿ ಮತ್ತು ಉಳಿಸಿ ಹಾಗೂ ಎಲ್ಲರೂ ಗಿಡಗಳನ್ನು ನೆಡಿ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೆಚ್.ಜಿ.ಶ್ರೀನಿವಾಸ್ ಹೇಳಿದರು.

ಇಂದು ಯತ್ತಂಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂತರಹಳ್ಳಿ ಬೆಟ್ಟದ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಎಂಬ ಅಭಿಯಾನದ ಮೂಲಕ ಸಸಿ ನೆಟ್ಟು ನಂತರ ಮಾತನಾಡಿದ ಅವರು ಮಳವಳ್ಳಿ ತಾಲ್ಲೂಕಿನ 39 ಗ್ರಾಮ ಪಂಚಾಯತಿಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿದೆವೆ ಅದ್ದರಿಂದ ಪ್ರತಿಯೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿ ನೆನಪಿಗಾಗಿ ಒಂದು ಗಿಡ ನೆಟ್ಟು ಬೆಳೆಸುವಂತೆ ತಿಳಿಸಿದರು.

ಪ್ರಕೃತಿಯ ಸ್ವರೂಪ ಅಮ್ಮನ ಹೆಸರನ್ನು ಅಮರವಾಗಿಸಲು ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು ಪರಿಸರವನ್ನ ಕಾಪಾಡುವಲ್ಲಿ ಪರಿಸರ ಪ್ರೇಮವನ್ನ ಬೆಳೆಸಿಕೊಳ್ಳ ಹಾಗೂ ನಗರೀಕರಣದ ಹೆಸರಿನಲ್ಲಿ ಕಾಂಕ್ರೀಟ್‌ರಣ ಹೆಚ್ಚಾಗುತ್ತಿದ್ದು ಪ್ರಸ್ತುತದ ಸಂದರ್ಭದಲ್ಲಿ ನಮ್ಮ ಪರಿಸರವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕಾಪಾಡಿಕೊಂಡು ಹೋಗಬೇಕಾಗಿದೆ. ಇಂದು ವೃಕ್ಷ ಅಭಿಯಾನದ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಹುಟ್ಟು ಹಬ್ಬಕ್ಕೆ ಗಿಡಗಳನ್ನು ನೆಡುವುದರಿಂದ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳು ಎಂದು ಹೇಳಿದರು.

ತಾಯಿಯ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಆಗಾಗಿ ಪ್ರತಿಯೊಬ್ಬರು ಅಮ್ಮನ ಹೆಸರಿನಲ್ಲಿ ಸಸಿ ಬೆಳೆಸಿ ಪ್ರಕೃತಿಗೆ ಒಂದು ಕೊಡುಗೆಯಾಗಿ ನೀಡಬೇಕೆಂದು ತಿಳಿಸಿದರು. ಪರಿಸರವನ್ನು ನಾವು ಹಸಿರಾಗಿಸಿದರೆ ಅದು ನಮಗೆ ಉಸಿರನ್ನು ನೀಡುತ್ತದೆ, ಪ್ರತಿಯೊಬ್ಬರ ಸಣ್ಣ ಹೆಜ್ಜೆಗಳು ದೊಡ್ಡ ಪರಿಣಾಮವೇ Plant4Mother ಎಂದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಭಾಗ್ಯಮ್ಮ, ಪಿಡಿಒ ಲೋಕೇಶ್, ಡಿ.ಆರ್.ಎಫ್.ಒ ಶಿವಕುಮಾರ್, ತಾಲ್ಲೂಕು ಐಇಸಿ ಸಂಯೋಜಕರಾದ ಸುನಿಲ್ ಕುಮಾರ್, ಕಾರ್ಯದರ್ಶಿಗಳಾದ ಅಭಿಷೇಕ್, ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಮಕ್ಕಳು, ಶಿಕ್ಷಕರು, ನರೇಗಾ ಕೂಲಿಕಾರರು, ಸಾರ್ವಜನಿಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.