ಮಂಡ್ಯ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಕಳೆದ 5 ವರ್ಷದ ಅವಧಿಯಲ್ಲಿ 1,85,468 ಕೋಟಿ ರೂಪಾಯಿಗಳ ತೆರಿಗೆ ವಂಚನೆ ಮಾಡಿದ್ದು, ಕೇಂದ್ರ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕನಿಷ್ಠ 11,495 ಕೋಟಿ ಪರಿಹಾರ ನೀಡಬೇಕೆಂಬ ಶಿಫಾರಸ್ಸನ್ನು ತಿರಸ್ಕರಿಸಿ ರಾಜ್ಯಕ್ಕೆ, ಗಾಯದ ಮೇಲೆ ಬರೆ ಎಳದಿದೆ ಎಂದು ಕಂದಾಯ ಸಚಿವ ಕೃಷ್ಣಭೇರೇಗೌಡ ಅಂಕಿ ಅಂಶಗಳನ್ನು ಸಭಿಕರ ಮುಂದಿಟ್ಟರು.
ನಗರದ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ಮತ್ತು ಜಾಗೃತಿ ಕರ್ನಾಟಕದ ವತಿಯಿಂದ ಆಯೊಜಿಸಿದ್ದ ‘ಕರ್ನಾಟಕಕ್ಕಾದ ತೆರಿಗೆ ಪಾಲಿನ ವಂಚನೆ ರೈತನ ಗಾಯದ ಮೇಲೆ ಬರೆ’ ಎಂಬ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
2023-24 ನೇ ಸಾಲಿನ ಜಿಎಸ್‌ಟಿ ಪಾಲಿನ ತೆರಿಗೆ 32,192 ಕೋಟಿ, 15ನೇ ಹಣಕಾಸು ಆಯೋಗದ ಪಾಲು 11,376 ಕೋಟಿ, ಸೆಸೆ ಮತ್ತು ಸರ್ ಚಾರ್ಚ್ ನಷ್ಟ 8,263 ಕೋಟಿ ಸೇರಿ ಒಟ್ಟು 51,831 ಕೋಟಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಬಾಕಿ ಇದೆ ಎಂದು ಮಾಹಿತಿ ನೀಡಿದರು. ಇನ್ನೂ 2023-24 ನೇ ಸಾಲಿನ 52,092 ಕೋಟಿ ರೂ ತೆರಿಗೆ ರಾಜ್ಯಕ್ಕೆ ಬರಬೇಕಿದೆ ಎಂದು ಅಂಕಿ ಅಂಶ ಸಮೇತ ಸಾಬೀತು ಪಡಿಸಿದರು.
ಕೇಂದ್ರದ ತೆರಿಗೆಗೆ ಶೇ.40ರಷ್ಟು ಪಾಲು ನೀಡುವ ದಕ್ಷಿಣ ಭಾರತದ ರಾಜ್ಯಗಳನ್ನು ಕಡೆಗಣಿಸಿ, ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಪಾಲಿ ನೀಡಿರುವ ಬಗ್ಗೆ ವಿವರಿಸಿದರು.
ಪ್ರಜಾಪ್ರಭುತ್ವ ಉಳಿದರೆ ಬಹುಸಂಖ್ಯಾತರಾಗಿರಯವ ರೈತರು, ದಲಿತರು, ಬಡವರು, ಶ್ರಮಿಕರು ಉಳಿಯುತ್ತಾರೆ. ಈ ಹಿನ್ನಲೆಯಲ್ಲಿ ರಾಜಕೀಯ ನಾಯಕರು ಸಾರ್ವಜನಿಕರಿಗೆ ಸತ್ಯದ ದರ್ಶನ ಮಾಡಿಸಬೇಕು ಎಂದು ಹೇಳಿದರು.
ವಿಚಾರಗೋಷ್ಠಿಯಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ, ರೈತ ಸಂಘದ ರಾಜ್ಯದಕ್ಷ ಬಡಗಲಪುರ ನಾಗೇಂದ್ರ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ಸೇರಿದ್ದಂತೆ ರೈತರು ಹಾಜರಿದ್ದರು





