ಗುಂಡ್ಲುಪೇಟೆ: ಇಲ್ಲಿನ ಮಾರುಕಟ್ಟೆ ಬಳಿ ಕಾರು ಹಾಗೂ ಕೇರಳ ಮೂಲದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಸಿದ್ದಯ್ಯನಹುಂಡಿ ಗ್ರಾಮದ ಸಂಮೃದ್ಧಿ (೨22) ಮೃತಪಟ್ಟವರು. ಆಕೆಯ ಪತಿ ನಾಗೇಂದ್ರಸ್ವಾಮಿ ಅವರಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೋ ಅಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಕಾರಿನಲ್ಲಿ ಬರುವಾಗ ಪಟ್ಟಣದ ಮಾರುಕಟ್ಟೆ ಬಳಿ ಲಾರಿ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಮುದ್ದುರಾಜ್ ಭೇಟಿ ನೀಡಿದರು.
ಮೃತಪಟ್ಟ ಯುವತಿ ಎಪಿಎಂಸಿ ವಾಜಿ ಅಧ್ಯಕ್ಷ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಸಗೂಲಿ ಗಂಗಾಧರಪ್ಪ ಅವರ ಮೊಮ್ಮಗಳಾಗಿದ್ದಾರೆ.



