ಚಾಮರಾಜನಗರ : ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಕೆ.ಅನ್ನದಾನಿ ಅವರು ತಮ್ಮ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನಿಗೆ ಹರಕೆ ಸಲ್ಲಿಸಿದ್ದಾರೆ. ಕೊರೊನಾ ತಡೆಗಾಗಿ ಮಾದಪ್ಪನ ಬಳಿ ಹರಕೆ ಹೊತ್ತಿದ್ದ ಅವರು ಸುಮಾರು 103 ಕಿ.ಮೀ ಪಾದಯಾತ್ರೆ ಹೊರಟು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕಾಲ್ನಡಿಗೆಯಲ್ಲಿ ಮಾದಪ್ಪನ ಯಾತ್ರೆ ಮಾಡ್ತಿದ್ದೇನೆ. 2019 ರಲ್ಲಿ ಕೊರೊನಾ ಮೊದಲ ಹಾಗೂ ಎರಡೂ ಅಲೆ ಇತ್ತು, ಆ ಸಂದರ್ಭದಲ್ಲಿ ದೇವರ ಮೊರೆ ಹೋಗಲಾಗಿತ್ತು. ಎಲ್ಲ ಧರ್ಮದವರು ದೇವರ ಮೊರೆ ಹೋಗಿದ್ರು. ಕೊರೊನಾ ತಡೆಗಾಗಿ ಹರಕೆ ಮಾಡಿಕೊಳ್ಳಲಾಗಿತ್ತು. ಸುಮಾರು 100 ಕಿ.ಮೀ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡ್ತಿದ್ದೇನೆ.
ಮಾದಪ್ಪನ ಚಿನ್ನದ ತೇರು ಎಳಿಸಿ, ಜನರಿ ಯಾವ ಸಂಕಷ್ಟ ಬಾರದ ರೀತಿ ಪ್ರಾರ್ಥನೆ ಮಾಡಿ ಎರಡೂ ರಾತ್ರಿ,ಮೂರು ಹಗಲು ಪಾದಯಾತ್ರೆ ಇರುತ್ತದೆ.ಎಂದರು.
ಮುಂದುವರಿದು 2023ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ಆಗಲೂ ಸಹ ಮಾದಪ್ಪನ ಸನ್ನಿಧಿಗೆ ಬಂದು ಪಾದಯಾತ್ರೆ ಮಾಡುತ್ತೇನೆ ಎಂದರು.
ಕುಮಾರಣ್ಣ ಸಿಎಂ ಆಗ್ಬೇಕು: ಮಾದಪ್ಪನಿಗೆ ಹರಕೆ ಕಟ್ಟಿಕೊಂಡ ಶಾಸಕ





