ಮಡಿಕೇರಿ: ವಿರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾಮದಲ್ಲಿ ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲಿನ ಮುಕ್ಕಾಟಿ ಕೊಪ್ಪಲು ನಿವಾಸಿ ಎ.ಬಿ ಮುತ್ತಣ್ಣ (68) ಗಾಂಜಾ ಬೆಳೆದ ವ್ಯಕ್ತಿ. ಬಂಧಿತ ವ್ಯಕ್ತಿಯಿಂದ 5 ಕೆ.ಜಿ. 500 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ವಿರಾಜಪೇಟೆ ಉಪ ವಿಭಾಗದ ಡಿ.ವೈ. ಎಸ್ ಪಿ .ಆರ್ ಮೋಹನ್ ಕುಮಾರ್ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ, ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಬಿ. ಎಸ್. ವಾಣಿಶ್ರೀ ಹಾಗೂ ಸಿಬ್ಬಂದಿಗಳು ಒಳಗೊಂಡ ವಿಶೇಷ ತಂಡ ಕಾರ್ಯಚರಣೆ ನಡೆಸಿ ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ ಎಂದು ಹೇಳಲಾಗಿದೆ.