ಮಡಿಕೇರಿ : ನಗರದಲ್ಲಿ ಮಂಗಳವಾರ ಸಂಜೆ ಸುರಿದ ಮಳೆಯಿಂದ ವಿದ್ಯಾರ್ಥಿಗಳು ಪರದಾಡಿದರೆ, ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.
ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಕಳೆದ ಕೆಲ ದಿನಗಳಿಂದ ಬಿಸಿಲಿನ ವಾತಾವರಣ ಕಂಡುಬಂದಿದೆ. ಆದರೆ, ಮಂಗಳವಾರ ಸಂಜೆ ವೇಳೆಗೆ ದಿಢೀರನೇ ಮಳೆಯಾಗಿದ್ದು, ಕಾವೇರಿ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಳೆಗೆ ವಾಹನ ಸವಾರರು ಕೂಡ ಸಮಸ್ಯೆ ಎದುರಿಸುವಂತಾಯಿತು.
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೧.೪೩ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ೨.೨೭ ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ ೦.೨೫ ಮಿ.ಮೀ., ಪೊನ್ನಂಪೇಟೆ ತಾಲ್ಲೂಕಿನಲ್ಲಿ ೦.೦೦ ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ೩.೦೫ ಮಿ.ಮೀ., ಕುಶಾಲನಗರ ತಾಲ್ಲೂಕಿನಲ್ಲಿ ೧.೬೦ ಮಿ.ಮೀ. ಮಳೆಯಾಗಿದೆ. ಮಡಿಕೇರಿ ಕಸಬಾ ೧, ಸಂಪಾಜೆ ೭.೫೦, ಭಾಗಮಂಡಲ ೦.೬೦, ಅಮ್ಮತ್ತಿ ೦.೫೦, ಸೋಮವಾರಪೇಟೆ ೨.೮೦, ಶನಿವಾರಸಂತೆ ೧, ಶಾಂತಳ್ಳಿ ೨.೪೦, ಕೊಡ್ಲಿಪೇಟೆ ೬, ಕುಶಾಲನಗರ ೧, ಸುಂಟಿಕೊಪ್ಪ ೨.೨೦ ಮಿ.ಮೀ. ಮಳೆಯಾಗಿದೆ.





