ಮಡಿಕೇರಿ: ಮಡಿಕೇರಿಯಿಂದ ಭಾಗಮಂಡಲಕ್ಕೆ ಹೋಗುವ ರಸ್ತೆಯಲ್ಲಿ ಅಪ್ಪಂಗಳದಿಂದ ಬೆಟ್ಟಗೇರಿ ಬಕ್ಕ ಸೇತುವೆವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಭಕ್ತಾದಿಗಳು ಸೇರಿದಂತೆ ಪ್ರವಾಸಿಗರು ಹಾಗೂ ಸ್ಥಳೀಯ ಜನರು ಈ ಭಾಗದಲ್ಲಿ ಸಂಚರಿಸಲು ಹರಸಹಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಈ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಪವಿತ್ರ ತೀರ್ಥಕ್ಷೇತ್ರಕ್ಕೆ ಹೋಗುವ ದಾರಿಯನ್ನು ನಿರ್ಲಕ್ಷಿಸಿರುವುದು, ಕೊಡಗಿನ ಪ್ರವಾಸೋದ್ಯಮಕ್ಕೂ ಕೂಡ ಕಪ್ಪು ಚುಕ್ಕೆ ತಂದಂತಾಗಿದೆ. ದಿನಕ್ಕೆ ನೂರಾರು ಪ್ರವಾಸಿಗರು ತಲಕಾವೇರಿಗೆ ಭೇಟಿ ನೀಡುತ್ತಿದ್ದು, ಮಡಿಕೇರಿ ಭಾಗಮಂಡಲ ರಸ್ತೆಯಲ್ಲಿ ಹೆಚ್ಚಿನವರು ಪ್ರಯಾಣ ಬೆಳೆಸುತ್ತಾರೆ. ಹೀಗಿದ್ದರೂ ಸರ್ಕಾರ ಈ ರಸ್ತೆಯನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.