Mysore
20
overcast clouds

Social Media

ಮಂಗಳವಾರ, 23 ಜೂನ್ 2026
Light
Dark

ಜನರಲ್ ತಿಮ್ಮಯ್ಯ ವೃತಕ್ಕೆ ಗುದ್ದಿದ ಕೆಎಸ್​ಆರ್​ಟಿಸಿ ಬಸ್ : ನೆಲಕ್ಕುರುಳಿದ ಸೇನಾನಿ ಪ್ರತಿಮೆ

ಕೊಡಗು : ಮಡಿಕೇರಿ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಕೆಎಸ್​ಆರ್​ಟಿಸಿ ಬಸ್​ವೊಂದು ಜನರಲ್ ತಿಮ್ಮಯ್ಯ ವೃತಕ್ಕೆ ಗುದ್ದಿದೆ. ಬಸ್​ ಡಿಕ್ಕಿ ಹೊಡೆದ ರಭಸಕ್ಕೆ ಸೇನಾನಿ ತಿಮ್ಮಯ್ಯ ಪ್ರತಿಮೆ ನೆಲಕ್ಕುರುಳಿ ಬಿದ್ದಿದೆ.

ಮಡಿಕೇರಿ ಡಿಪೊದಿಂದ ಬಸ್ ಸ್ಟ್ಯಾಂಡ್ ಗೆ ಹೊರಟ್ಟಿದ್ದ ಬಸ್ ಪಿಕಪ್ ವಾಹನ ಅಪಘಾತ ತಪ್ಪಿಸಲು ಹೋಗಿ ತಿಮ್ಮಯ್ಯ ಮೂರ್ತಿಗೆ ಗುದ್ದಿದೆ. ಘಟನೆಯಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಹಾನಿಯಾಗಿದ್ದು, ಬಸ್​ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಬಸ್​ ಚಾಲಕ ಕೊಟ್ರೇಶ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!