Mysore
24
overcast clouds

Social Media

ಶನಿವಾರ, 25 ಏಪ್ರಿಲ 2026
Light
Dark

ಪತ್ರಕರ್ತರು ಕೂಡಾ ಇಂದು ಬೆದರಿಕೆಗಳನ್ನು ಎದುರಿಸುವಂತಾಗಿದೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್

 ಕುಶಾಲನಗರ : ಎಪಿಸಿಎಂಎಸ್‌ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳ ವಿಮರ್ಶೆ ಆಗಬೇಕಿದೆ. ಜನಪ್ರತಿನಿಧಿಗಳಿಗೂ ಕೆಲವು ಇತಿಮಿತಿಗಳಿದ್ದು, ಇಂತಹ ಸಂದರ್ಭ ಸಲಹೆ ಸೂಚನೆಗಳ ಅಗತ್ಯತೆ ಇರುತ್ತದೆ. ಪತ್ರಿಕೆ ಮತ್ತು ಮಾಧ್ಯಮಗಳ ಮೂಲಕ ಪತ್ರಕರ್ತರು ಯಾವುದೇ ವಿಷಯಗಳ ಸಾಧಕ ಬಾಧಕಗಳ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವಂತಾಗಬೇಕು ಎಂದರು. ಪತ್ರಕರ್ತರ ಕರ್ತವ್ಯಕ್ಕೆ ನಿರ್ಬಂಧ ಸಲ್ಲದು. ಆದರೆ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರಮುಖ ಪಾತ್ರವಹಿಸುವ ಪತ್ರಕರ್ತರು ಕೂಡಾ ಇಂದು ಬೆದರಿಕೆಗಳನ್ನು ಎದುರಿಸುವಂತಾಗಿದ್ದು, ಸರಕಾರ ಅವರ ಜೀವಕ್ಕೆ ಭದ್ರತೆ ಒದಗಿಸಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಅಭಿಪ್ರಾಯಪಟ್ಟರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!