ಕೊಡಗು: ನದಿ ಅಥವಾ ಹಿನ್ನೀರಿನಲ್ಲಿ ಈಜಲು ಇಳಿಯಬೇಡಿ ಎಂದು ಕುಶಾಲನಗರ ಅಗ್ನಿಶಾಮಕ ಠಾಣೆಯು ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಕೊಡಗು, ಮಡಿಕೇರಿ, ಕುಶಾಲನಗರ ಸೇರಿದಂತೆ ಜಿಲ್ಲೆಯಲ್ಲಿ ಕಾವೇರಿ ನದಿ ಹರಿಯುವಿಕೆಯ ಪ್ರಮಾಣ ಹೆಚ್ಚಾಗಿದೆ. ಈ ಬೇಸಿಗೆಯಲ್ಲಿ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಥಳೀಯರು ನದಿಯಲ್ಲಿ ಈಜಲು ತೆರಳುವುದರಿಂದ ನದಿಯಲ್ಲಿ ಮುಳುಗಿ ಮೃತಪಡುತ್ತಿರುವುದು ನಿಜಕ್ಕೂ ದೌರ್ಭಾಗ್ಯ.
ಆದರೆ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಇರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಹಾಗೂ ಹಿನ್ನೀರಿನಲ್ಲಿ ಈಜಲು ತೆರಳಬೇಡಿ. ನದಿಯ ಆಳ ಮತ್ತು ನದಿ ಹರಿಯುವಿಕೆ ಪ್ರಮಾಣ ನಿಮಗೆ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ನೀರಿನಲ್ಲಿ ಈಜುತ್ತಿದ್ದಾಗ ಆಳ ಪ್ರದೇಶಕ್ಕೆ ಜಾರುವುದರಿಂದ ಭಯ ಉಂಟಾಗಿ ಮತ್ತು ಉಸಿರಾಟದ ಸಮಸ್ಯೆಯಿಂದ ಹಾಗೂ ಮುಂದೆ ಏನು ಮಾಡಬೇಕೆಂದು ತಿಳಿಯದೆ ಉಸಿರು ಚೆಲ್ಲುತ್ತಿದ್ದಾರೆ.
ಹಾಗಾಗಿ ಯಾವುದೇ ವಿದ್ಯಾರ್ಥಿಗಳು, ಯುವಕರು ಹಾಗೂ ಸ್ಥಳೀಯರು ನೀರಿನಲ್ಲಿ ಇಳಿಯಬಾರದು ಎಂದು ಸೂಚನೆ ನೀಡಿದೆ.





