Mysore
21
broken clouds

Social Media

ಸೋಮವಾರ, 15 ಜೂನ್ 2026
Light
Dark

ಅನಾರೋಗ್ಯದಿಂದ ಯೋಧ ಕೆ.ಕೆ.ಶಿಜು ನಿಧನ

ಮಡಿಕೇರಿ: ಜಾರ್ಖಂಡ್‌ನ ರಾಂಚಿಯಲ್ಲಿ ಸಿ.ಐ.ಎಸ್.ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಯೋಧರೊಬ್ಬರು ಅನಾರೋಗ್ಯದಿಂದ ನಿಧನರಾಗಿರುವ ಘಟನೆ ಗುರುವಾರ ನಡೆದಿದೆ. ಕೆ.ಕೆ.ಶಿಜು(೪೮) ಮೃತಪಟ್ಟ ಯೋಧ.
ಪ್ರಸ್ತುತ ರಾಂಚಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ೨೩ ವರ್ಷ ಸೇವೆ ಸಲ್ಲಿಸಿದ ಯೋಧ ಮಡಿಕೇರಿ ತಾಲೂಕಿನ ಕಡಗದಾಳು ನಿವಾಸಿ ದಿವಂಗತ ಕೇಶವ ಹಾಗೂ ರಾಜಮ್ಮನವರ ಪುತ್ರರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಗುರುವಾರ ಮಧ್ಯಾಹ್ನ ೧೨ ಗಂಟೆಗೆ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರ ರಾಂಚಿಯಿಂದ ಜಿಲ್ಲೆಗೆ ಬರಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!