Mysore
22
broken clouds

Social Media

ಶುಕ್ರವಾರ, 11 ಜುಲೈ 2025
Light
Dark

ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರ ಅಳವಡಿಕೆ

ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಡಯಾಲಿಸಿಸ್ ಸೇವೆ ಉನ್ನತೀಕರಣ

ಮೈಸೂರು: ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರವನ್ನು ಅಳವಡಿಸುವ ಮೂಲಕ ಡಯಾಲಿಸಿಸ್ ಸೇವೆಯನ್ನು ಉನ್ನತೀಕರಿಸಿದೆ.

ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರವು ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಯಾಲಿಸಿಸ್ ಯಂತ್ರವಾಗಿದ್ದು, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗಕ್ಕೆ ಈ ೫ ಯಂತ್ರಗಳ ಸೇರ್ಪಡೆಯು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸುರಕ್ಷತೆಯಲ್ಲಿ ನಿರಂತರ ಸುಧಾರಣೆಯ ಹಾದಿಗೆ ಸಾಕ್ಷಿಯಾಗಿದೆ.

ತೀವ್ರ ನಿಗಾ ಘಟಕದಲ್ಲಿ ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ನೀಡುವ ಡಾಂಲಿಸಿಸ್ ಚಿಕಿತ್ಸೆಯಲ್ಲಿ ಸಸ್ಟ್ತ್ಯೆನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್  ಜನಪ್ರಿಯವಾಗುತ್ತಿರುವ ಚಿಕಿತ್ಸ ವಿಧಾನವಾಗಿದೆ. ಸಸ್ಟ್ತ್ಯೆನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್ ಸಾಂಪ್ರದಾಯಿಕ ಇಂಟರ್ಮಿಟೆಂಟ್ ಹಿಮೋ ಡಯಾಲಿಸಿಸ್  ಮತ್ತು ಕಂಟಿನ್ಯೂಸ್ ರೆನಲ್ ರಿಪ್ಲೇಸೆಮೆಂಟ್ ಥೆರಪಿ ನಡುವಿನ ಮಧ್ಯಂತರ ಹೈಬ್ರಿಡ್ ಡಯಾಲಿಸಿಸ್ ವಿಧಾನವಾಗಿದೆ.

ಸ್ಲೆಡ್ ಚಿಕಿತ್ಸಾ ವಿಧಾನದ ಪ್ರಯೋಜನಗಳೆಂದರೆ ಸಣ್ಣ ದ್ರಾವಣಗಳ ಸಮರ್ಥ ತೆರವು, ಉತ್ತಮ ಹಿಮೋಡೈನಾಮಿಕ್ ಸಹಿಷ್ಣುತೆ. ರೋಗಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಈ ವಿಧಾನದಿಂದ ರೋಗಿಗಳು ಆಸ್ಪತ್ರೆಯಲ್ಲಿ ಕಳೆಯಬೇಕಾದ ಸಾಮ್ಯ ಹಾಗೂ ಚಿಕಿತ್ಸೆಗೆ ತಗಲುವ ವೆಚ್ಚ ಎರಡೂ ಕಡಿಮೆಯಾಗಲಿವೆ.

ಉಚಿತ ಸಾರಿಗೆ ಸೌಲಭ್ಯ: ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ಉಚಿತ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ. ಈ ಉಚಿತ ಸೇವೆಯು ತುಂಬಾ ಉಪಯುಕ್ತ ವಾಗಿದೆ. ಏಕೆಂದರೆ ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು ದುರ್ಬಲರಾಗುತ್ತಾರೆ ಮತ್ತು ಕಾರ್ಯ ವಿಧಾನದ ನಂತರ ಸ್ನಾಯು ಸೆಳೆತ, ಬಿಪಿ ಏರಿಳಿತಗಳು ಮತ್ತು ಮುಂತಾದವುಗಳನ್ನು ಅನುಭವಿಸುತ್ತಾರೆ. ಸಾರಿಗೆಯನ್ನು ಹುಡುಕುವ ಯಾವುದೇ ಒತ್ತಡವಿಲ್ಲದೆ ರೋಗಿಗಳು ಮನೆಗೆ ತೆರಳಿ ಚೇತರಿಸಿಕೊಳ್ಳಬಹುದಾಗಿದೆ. ಡಯಾಲಿಸಿಸ್ ರೋಗಿಗಳು ಸಹಾಯವಾಣಿ ಸಂಖ್ಯೆ: 8884458893  ಕರೆ ಮಾಡುವ ಮೂಲಕ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!