Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ವಿದ್ಯುತ್ ಸ್ಪರ್ಶ : ದಂಪತಿ ಸಾವು

ಚಾಮರಾಜನಗರ ತಾಲ್ಲೂಕಿನ ಮಸಣಾಪುರದಲ್ಲಿ ದಾರುಣ ಘಟನೆ

ಚಾಮರಾಜನಗರ: ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿ ಪತಿ, ಪತ್ನಿ ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ತಾಲ್ಲೂಕಿನ ಮಸಣಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ನಂಜುಂಡನಾಯಕ (63), ಅವರ ಪತ್ನಿ ದೇವೀರಮ್ಮ(55) ಮೃತಪಟ್ಟವರು.
ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ಪತಿಗೆ ದೇವೀರಮ್ಮ
ಬೆಳಿಗ್ಗೆ ತಿಂಡಿ ತೆಗೆದುಕೊಂಡು ಹೋಗಿದ್ದರು. ತಿಂಡಿಗೆ ಮೊದಲು ಬಾಳೆ ಎಲೆ ತೊಳೆುಂಲು ಕೃಷಿ ಪಂಪ್‌ಸೆಟ್ ಬಳಿ ಹೋದಾಗ ವಿದ್ಯುತ್ ಸ್ಪರ್ಶವಾಗಿ ಒದ್ದಾಡುತ್ತಿದ್ದರು.
ಇದನ್ನು ಗಮನಿಸಿದ ನಂಜುಂಡನಾಯಕ ಅವರು, ಪತ್ನಿ ಮೂರ್ಛೆ ಬಿದ್ದಿರಬಹುದು ಎಂದು ಅವರನ್ನು ಎಚ್ಚರಿಸಲು ಹೋಗಿ ತಾವೂ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಪಕ್ಕದಲ್ಲೇ ಇದ್ದ ಮೃತರ 12 ವರ್ಷದ ಮೊಮ್ಮಗ, ಗಾಬರಿಯಿಂದ ಓಡಿ ಬಂದು ಪಕ್ಕದ ಜಮೀನಿನವರಿಗೆ ತಿಳಿಸಲಾಗಿ, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಮೃತರಿಗೆ ಮೂವರು ಪುತ್ರಿಯರು, ಓರ್ವ ಪುತ್ರ ಇದ್ದು ಎಲ್ಲರ ಆಕ್ರಂದನ ಮನ ಕಲಕುವಂತಿತ್ತು. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ .

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!