Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ದಸರಾ ನೆನಪು: ಅಂದಿನ ಸಂಭ್ರಮ, ಸಡಗರ ಇಂದು ಇಲ್ಲ

ಮೈಸೂರು: ಹಿಂದೆ ಪ್ರತಿವರ್ಷ ದಸರಾ ಮೆರವಣಿಗೆ ನೋಡುತ್ತಿದ್ದೆ. ಆದರೆ, ಅಂದಿನ ಸಂಭ್ರಮ ಸಡಗರ ಇಂದು ಇಲ್ಲ, ಇಂದು ಕಾಟಚಾರಕ್ಕಾಗಿ ದಸರಾ ಆಚರಣೆ ಮಾಡುತ್ತಿದ್ದಾರೆ. ಮಹಾರಾಜರು ಆನೆ ಮೇಲೆ ಕುಳಿತು ಬರುತ್ತಿದ್ದ ಸಡಗರ ಇವತ್ತಿನ ಆಚರಣೆಯಲ್ಲಿ ಇಲ್ಲ, ಹಿಂದೆ ಬನ್ನಿ ಮಂಟಪಕ್ಕೆ ಮಹಾರಾಜರು ಹೋಗಿ ಬರುತ್ತಿದ್ದರು. ಆ ಸಂದರ್ಭದಲ್ಲಿ ಅಸಂಖ್ಯಾತ ಜನರು ಅವರ ಹಿಂದೆ ಹೋಗುತ್ತಿದ್ದರು.

ನಮ್ಮ ಕಾಲಘಟ್ಟದಲ್ಲಿ ನಡೆಯುತ್ತಿದ್ದ ದಸರಾ ಸಡಗರವೇ ಬೇರೆ, ಈಗ ನೆಪ ಮಾತ್ರಕ್ಕೆ ಸರ್ಕಾರದವರು ಆಚರಣೆ ಮಾಡುತ್ತಿದ್ದಾರೆ ಅಷ್ಟೇ, ಹಿಂದೆ ಮಹಾರಾಜರು ಎನ್ನುವ ಭಕ್ತಿ, ಅಭಿಮಾನ ಇತ್ತು. ಈಗ ದಸರಾ ಎಂದರೆ ಸರ್ಕಾರಿ ವ್ಯಾವಹಾರವಾಗಿ ಬಿಟ್ಟಿದೆ. ಬಾಹುಕವಾದಂತಹ ಪ್ರಕ್ರಿಯೆ ಇಲ್ಲ. ಒಮ್ಮೆ ದಸರಾ ಮೆರವಣಿಗೆ ವೇಳೆ ಮಳೆ ಬಂದು ಜನರು ದಿಕ್ಕಾಪಾಲಾಗಿ ಓಡಿದ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ,

-ಸಾಹಿತಿ, ಸಿಪಿಕೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!