ಮೈಸೂರು :ವಿಶ್ವವಿಖ್ಯಾತ ನಾಡ ಹಬ್ಬ ಮೖೆಸೂರು ದಸರೆಯ ಅಂಬಾರಿ ಆನೆ ಅಭಿಮನ್ಯುವಿಗೆ ಇಂದಿನಿಂದ ಭಾರ ಹೊರಿಸುವ ತಾಲೀಮು ಆರಂಭಗೊಂಡಿದೆ.
ಅರಮನೆಯ ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ 300 ಕೆಜಿ ತೂಕದ ಮರಳಿನ ಮೊಟ್ಟೆ ಹೊತ್ತ ಅಭಿಮನ್ಯು ಹೆಜ್ಜೆ ಹಾಕಿದನು. ಅಭಿಮನ್ಯುವಿನ ಜೊತೆ ಗೋಪಾಲಸ್ವಾಮಿ, ಧನಂಜಯ, ಲಕ್ಷ್ಮಿ, ಮಹೇಂದ್ರ, ಭೀಮ, ಅರ್ಜುನ ಆನೆಗಳು ಕೂಡ ಭಾಗಿಯಾದವು.