Light
Dark

ನಿಯಂತ್ರಣ ತಪ್ಪಿ ಲಾರಿ ಪಲ್ಟಿ : ಚಾಲಕ ಸಾವು

ಮಡಿಕೇರಿ: ಕೋಳಿ ಸಾಗಾಟದ ಲಾರಿಯೊಂದು ಮಗುಚಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಕೊಡಗರಹಳ್ಳಿ ಬಳಿ ನಡೆದಿದೆ. ಮಂಗಳೂರು ಮೂಲದ ನಾಗಭೂಷಣ್ ಮೃತ ದುರ್ದೈವಿ. ಲಾರಿ ಮಂಗಳೂರು ಕಡೆಗೆ ಹೋಗುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ