ಚಾಮರಾಜನಗರ: ಯುವಕನ ಜೊತೆ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿ, ಪೊಲೀಸ್ ಠಾಣೆ ಮುಂದೆಯೇ ಯುವತಿ ಸಂಬಂಧಿಕರು ಯುವಕನಿಗೆ ಚಾಕು ಇರಿದಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.
ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಜಾಕೀರ್ ಹಾಗೂ ಆತನ ಸ್ನೇಹಿತ ಆರ್ಮುಗಮ್ ಎಂಬ ಯುವಕನಿಗೆ ಚಾಕು ಇರಿದಿದ್ದಾರೆ.ಕಳೆದ ನಾಲ್ಕು ದಿನಗಳಿಂದ ಯುವತಿ ನಾಪತ್ತೆಯಾಗಿದ್ದು, ಇದಕ್ಕೆ ಮಹೇಂದ್ರ ಎಂಬಾತನೇ ಕಾರಣ ಎಂದು ಯುವತಿ ಸಂಬಂಧಿಕರು ಶಂಕಿಸಿದ್ದಾರೆ.ಇದೇ ವೇಳೆ ಮಹೇಂದ್ರ ಸಂಬಂಧಿ ಆರ್ಮುಗಮ್ ಎಂಬಾತ ಮಹೇಂದ್ರ ಕಾಣೆಯಾಗಿದ್ದಾನೆ ಎಂದು ಗುಂಡ್ಲುಪೇಟೆ ಠಾಣೆಗೆ ದೂರು ಕೊಡಲು ಬಂದಿದ್ದಾನೆ.ಈ ವೇಳೆ ಆರ್ಮುಗಮ್‌ಗೆ ಜಾಕಿರ್ ಹಾಗೂ ಆತನ ಸ್ನೇಹಿತ ಇಬ್ಬರೂ ಚಾಕು ಇರಿದಿದ್ದಾರೆ.
ಆರ್ಮುಗಮ್ ಕುತ್ತಿಗೆ ಭಾಗದಲ್ಲಿ ಚಾಕು ಇರಿಯಲಾಗಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





