ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್ ಸರ್ವಾನುಮತದಿಂದ ಆಯ್ಕೆಯಾದರು.
ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ಅವರು ಪಾಟೀಲ್ ಅವರನ್ನು ಕರೆತಂದು ಪೀಠದಲ್ಲಿ ಕೂರಿಸಿದರು. ಸ್ಪೀಕರ್ ಆಯ್ಕೆ ಮುಗಿದ ಬಳಿಕ ಕಲಾಪದೊಳಗೆ ವಿಪಕ್ಷ ಬಿಜೆಪಿ ಸದಸ್ಯರು ಪ್ರವೇಶ ಮಾಡಿದರು.




