ನವದೆಹಲಿ: ಯುಪಿಐ ಮೂಲಕ ಪಾವತಿ ಮಾಡುವವರಿಗೆ ಹಾಗೂ ವ್ಯಾಪಾರಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್, ಅಂದರೆ ಎಂಡಿಆರ್ ಶುಲ್ಕ ವಿಧಿಸುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ಎನ್‌ಪಿಸಿಐ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.
ದೀಪಾವಳಿ ಬಳಿಕ ಯುಪಿಐ ಪಾವತಿಗಳಿಗೆ ಶುಲ್ಕ ಜಾರಿಯಾಗಲಿದೆ ಎಂಬ ಚರ್ಚೆಗಳ ನಡುವೆ ಈ ಸ್ಪಷ್ಟನೆ ಬಂದಿದೆ.
ಶುಲ್ಕ ಜಾರಿಗೆ ಯಾವುದೇ ಅಧಿಕೃತ ದಿನಾಂಕವನ್ನೂ ಪ್ರಕಟಿಸಿಲ್ಲ. ಹೀಗಾಗಿ, ಸದ್ಯಕ್ಕೆ ಎಂಡಿಆರ್ ಶುಲ್ಕದ ಬಗ್ಗೆ ಬಳಕೆದಾರರು ಹಾಗೂ ವ್ಯಾಪಾರಿಗಳು ಆತಂಕಪಡಬೇಕಿಲ್ಲ ಎಂಬುದು ವರದಿಯ ಸಾರಾಂಶ.




