Mysore
23
broken clouds

Social Media

ಭಾನುವಾರ, 23 ಮಾರ್ಚ್ 2025
Light
Dark

ಬಂಡೀಪುರ: ಸಫಾರಿ ವೇಳೆ ಪ್ರವಾಸಿಗರ ಕ್ಯಾಮರಾಗೆ ಸೆರೆಸಿಕ್ಕ ಹುಲಿ

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕಣ್ಣಿಗೆ ಹುಲಿಯೊಂದು ಕಾಣಿಸಿಕೊಂಡಿದೆ.

ಈ ಬಾರಿ ದಾಖಲೆಯಲ್ಲಿ ಮುಂಗಾರು ಮಳೆ ಸುರಿದ ಪರಿಣಾಮ ಬಂಡೀಪುರ ಅರಣ್ಯ ಅಚ್ಚ ಹಸಿರಿನಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ಮೇವಿನ ಕೊರತೆ ಕಂಡುಬಂದಿಲ್ಲ.

ಪರಿಣಾಮ ಸಫಾರಿಗೆ ತೆರಳುವ ಪ್ರವಾಸಿಗರಿಗೆ ದಿನನಿತ್ಯ ಪ್ರಾಣಿಗಳು ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರು ಫುಲ್‌ ಖುಷ್‌ ಆಗುತ್ತಿದ್ದಾರೆ.

ಸಫಾರಿಗೆ ತೆರಳಿದ್ದ ಪ್ರವಾಸಿಗರ ಮುಂದೆ ಹುಲಿ ದರ್ಶನ ಕೊಟ್ಟಿದ್ದು, ಹುಲಿಯನ್ನು ಕಂಡು ಪ್ರವಾಸಿಗರು ಫುಲ್‌ ಖುಷ್‌ ಆಗಿದ್ದಾರೆ.

ಹೆಚ್ಚು ನೀರಿರುವ ಕೆರೆಗಳ ಬಳಿ ಪ್ರಾಣಿಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಾಣಸಿಗುತ್ತಿವೆ ಎಂದು ಸಫಾರಿಗೆ ಕರೆದುಕೊಂಡು ಹೋಗು ಗೈಡ್‌ಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ನೋಡಿ ಖುಷಿ ಪಡುವ ವೀಕೆಂಡ್‌ ಬಂದರೆ ಸಾಕು, ಬಂಡೀಪುರದತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

Tags: