Mysore
24
mist

Social Media

ಶುಕ್ರವಾರ, 14 ನವೆಂಬರ್ 2025
Light
Dark

ಚಾಮರಾಜನಗರ ಜಿಲ್ಲೆಯ ಸ್ತಬ್ಧ ಚಿತ್ರಕ್ಕೆ ದೊರಕಿದ ಮೂರನೇ ಸ್ಥಾನ

ಚಾಮರಾಜನಗರ: ಮೈಸೂರು ದಸರಾ ಮಹೋತ್ಸವ 2024ರ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಚಾಮರಾಜನಗರಕ್ಕೆ ತೃತೀಯ ಸ್ಥಾನ ದೊರಕಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು, ದಸರಾ ಮಹೋತ್ಸವ 2024ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರ ಆಕರ್ಷಣೀಯ ಮೆರವಣಿಗೆಯಲ್ಲಿ ಎಲ್ಲಾ ಜಿಲ್ಲೆಗಳು ಸ್ಥಾಪಿಸಿದ ಚಿತ್ರಗಳು ಪಾಲ್ಗೊಂಡಿದ್ದವು. ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ ಪ್ರವಾಸಿಗರಿಗೆ ಹಾಗೂ ದಸರಾ ವೀಕ್ಷಣೆ ಮಾಡುತ್ತಿದ್ದ ಜನರಿಗೆ ಬಹಳ ಆಕರ್ಷಣೆಯಾಗಿ ಮೂಡಿ ಬಂದಿದೆ.

ಅದರ ಪೈಕಿ ಚಾಮರಾಜನಗರ ಜಿಲ್ಲೆಯ ಸ್ತಬ್ಧ ಚಿತ್ರಕ್ಕೆ ಮೂರನೇ ಸ್ಥಾನ ದೊರಕಿದೆ.

ನಮ್ಮ ಸ್ತಬ್ಧಚಿತ್ರವನ್ನು “ಸೋಲಿಗರ ಸೊಗಡು, ಒಮ್ಮೆ ನೀ ಬಂದು ನೋಡು” ಎಂಬ ಶೀರ್ಷಿಕೆಯಲ್ಲಿ ಪ್ರದರ್ಶಿಸಲಾಗಿತ್ತು.

ಕಲಾವಿದರ ಶ್ರಮ, ನಿಯೋಜಿತ ಅಧಿಕಾರಿಗಳ ಶಿಸ್ತಿನ ಶ್ರಮದಿಂದ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ಮೂಡಿ ಬಂದಿದೆ, ಚಾಮರಾಜನಗರ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆಯ ಪರವಾಗಿ ದಸರಾ ಉಪ ಸಮಿತಿ ಹಾಗೂ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಧನ್ಯವಾದ ತಿಳಿಸಿದ್ದಾರೆ.

Tags:
error: Content is protected !!