Mysore
30
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಅಕ್ರಮ ಗಾಂಜಾ,ನಾಡ ಬಂದೂಕು ಶೇಖರಣೆ : ಓರ್ವ ಪೊಲೀಸ್‌ ವಶಕ್ಕೆ

Illegal ganja and country-made gun seized: One person in police custody.

ಹನೂರು : ಅಕ್ರಮ ಗಾಂಜಾ ಹಾಗೂ ನಾಡ ಬಂದೂಕು ಶೇಖರಣೆ ಮಾಡಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯುವಲ್ಲಿ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.

ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು ಗ್ರಾಮದ ವೆಂಕಟರಾಜು ಬಂಧಿತ ಆರೋಪಿಯಾಗಿದ್ದಾನೆ.

ಘಟನೆಯ ವಿವರ
ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸ್ತೂರು ಗ್ರಾಮದ ವೆಂಕಟರಾಜು ಮನೆಯಲ್ಲಿ ಅಕ್ರಮ ಒಣಗಾಂಜಾ ಹಾಗೂ ನಾಡ ಬಂದೂಕು ಶೇಖರಣೆ ಮಾಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ, ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದಾಗ ಮನೆಯಲ್ಲಿ 160 ಗ್ರಾಂ ಒಣ ಗಾಂಜಾ ಹಾಗೂ ನಾಡ ಬಂದೂಕು ಇರುವುದು ಪತ್ತೆಯಾಗಿದೆ ತಕ್ಷಣ ಮಾಲು ಸಮೇತ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ದಾಳಿಯಲ್ಲಿ ಪ್ರೊಫೆಷನರಿ ಎ.ಸಿ. ಎಫ್ ಸಂದೀಪ್ ಕುಮಾರ್, ಡಿ ಆರ್ ಎಫ್ ಶಿವನಗೌಡ, ಪೊಲೀಸ್ ಸಿಬ್ಬಂದಿಗಳಾದ ಸಿದ್ದರಾಮಯ್ಯ, ರಮೇಶ್, ನಂಜುಂಡಸ್ವಾಮಿ, ರವಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Tags:
error: Content is protected !!