ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ರಾತ್ರಿ ಕಾಡಾನೆಯೊಂದು ರಸ್ತೆಗಿಳಿದ ಪರಿಣಾಮ ವಾಹನ ಸವಾರರು ಕೆಲಕಾಲ ಪರದಾಟ ನಡೆಸಿರುವ ಘಟನೆ ನಡೆದಿದೆ.
ಬಂಡೀಪುರ ಉದ್ಯಾನವನದಲ್ಲಿ ರಸ್ತೆಯಲ್ಲಿ ತರಕಾರಿ ಹೊತ್ತು ಬರುವ ವಾಹನಗಳು ಹಾಗೂ ಕಬ್ಬು ತುಂಬಿಕೊಂಡು ಹೋಗುವ ಲಾರಿಗಳನ್ನು ಕಂಡರೆ ಸಾಕು ಆನೆಗಳು ರಸ್ತೆಗಿಳಿಯೋದು ಸರ್ವೇ ಸಾಮಾನ್ಯವಾಗಿದೆ.
ಅದೇ ರೀತಿ ಕಳೆದ ರಾತ್ರಿ ಒಂಟಿಸಲಗವೊಂದು ರಸ್ತೆಗಿಳಿದು ವಾಹನಗಳು ಮುಂದಕ್ಕೆ ಹೋಗಲು ಬಿಡದೇ ಕೆಲಕಾಲ ಆತಂಕ ಸೃಷ್ಟಿಸಿತ್ತು.
ಬಳಿಕ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ರಸ್ತೆ ಮಧ್ಯೆಯೇ ನಿಂತಿದ್ದ ಆನೆಯು, ವಾಹನ ಸವಾರರು ಪರದಾಟ ನಡೆಸುವ ರೀತಿ ಮಾಡಿತ್ತು. ಬಳಿಕ ಆನೆ ಕಾಡಿನತ್ತ ತೆರಳಿದ ಪರಿಣಾಮ ವಾಹನ ಸವಾರರು ಮುಂದಕ್ಕೆ ಹೋಗಲು ಅವಕಾಶವಾಯಿತು.