Mysore
29
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಗರಿಗೆದರಿದ ಚಾಮರಾಜನಗರ ಲೋಕಲ್‌ ರಾಜಕೀಯ

ಚಾಮರಾಜನಗರ: ಕೊನೆಗೂ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಚಾಮರಾಜನಗರ, ಕೊಳ್ಳೇಗಾಲದಲ್ಲಿ ನಗರಸಭೆ ಅಸ್ತಿತ್ವದಲ್ಲಿದ್ದು, ಮೀಸಲು ನಿಗದಿಯಾಗದ ಕಾರಣಕ್ಕೆ ಕಳೆದ ಒಂದು ವರ್ಷ ಮೂರು ತಿಂಗಳಿನಿಂದಲೂ ಎರಡು ನಗರಸಭೆಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳೆರಡು ಖಾಲಿ ಇದ್ದವು.

ಇನ್ನು ಗುಂಡ್ಲುಪೇಟೆ ಪುರಸಭೆ, ಹನೂರು ಹಾಗೂ ಯಳಂದೂರು ಪಟ್ಟಣ ಪಂಚಾಯಿತಿಗಳಲ್ಲೂ ಇದೇ ಸಮಸ್ಯೆಯಾಗಿದೆ. ಒಟ್ಟಾರೆ ಎಲ್ಲೆಡೆಯು ಪಕ್ಷೇತರರು, ಜಾತ್ಯಾತೀತ ಜನತಾದಳ ಹಾಗೂ ಬಿಎಸ್‌ಪಿಯ ಸದಸ್ಯರು ನಿರ್ಣಾಯಕ ಪಾತ್ರ ವಹಿಸಲಿದ್ದು, ಬಹು ಬೇಡಿಕೆಯಲ್ಲಿರುತ್ತಾರೆ.

ಚಾಮರಾಜನಗರ ನಗರಸಭೆಯಲ್ಲಿ ಒಟ್ಟು 31 ಸ್ಥಾನಗಳಿಗೆ ಬಿಜೆಪಿ 15, ಕಾಂಗ್ರೆಸ್‌ 8, ಎಸ್‌ಡಿಪಿಐ 6, ಬಿಎಸ್‌ಪಿ ಹಾಗೂ ಪಕ್ಷೇತರ ತಲಾ ಒಂದು ಸ್ಥಾನಗಳನ್ನು ಗೆದ್ದಿವೆ. ಸದ್ಯ ಬಿಜೆಪಿ ಹೆಚ್ಚಿನ ಸ್ಥಾನ ಪಡೆದಿದ್ದು, ಅಧಿಕಾರ ಹಿರಿಯಬೇಕಾದರೆ ಇನ್ನು 2 ಮತಗಳ ಬೆಂಬಲ ಅಗತ್ಯವಿದೆ. ಬಿಜೆಪಿ ಮೊದಲ ಅವಧಿಯಲ್ಲಿ ಆಡಳಿತ ನಡೆಸಿತ್ತು. ಇದೀಗ ಎರಡನೇ ಅವಧಿಗೂ ಆ ಪಕ್ಷಕ್ಕೆ ಅವಕಾಶವಿದೆ.

ಇನ್ನು ಕಾಂಗ್ರೆಸ್‌ ಪಕ್ಷಕ್ಕೆ ತನ್ನ 8 ಸ್ಥಾನದೊಂದಿಗೆ ಶಾಸಕ, ಸಂಸದರ ಮತ ಬಲವೂ ಸೇರಿದಂತೆ 10 ಹಾಗೂ ಎಸ್‌ಡಿಪಿಐನ 6 ಹಾಗೂ ಪಕ್ಷೇತರ ಅಥವಾ ಬಿಎಸ್‌ಪಿ ಬೆಂಬಲ ಪಡೆದರೆ ಆ ಪಕ್ಷಕ್ಕೂ ಅಧಿಕಾರಕ್ಕೇರುವ ಅವಕಾಶವಿದೆ.

ಇನ್ನು ಕೊಳ್ಳೇಗಾಲದಲ್ಲಿ ಪಕ್ಷೇತರ ನಿರ್ಣಾಯಕವಾಗಿದ್ದು, ಗುಂಡ್ಲುಪೇಟೆಯಲ್ಲಿ ಬಿಜೆಪಿಗೆ ಬಹುಮತವಿದೆ. ಇದೆಲ್ಲಾ ಬೆಳವಣಿಗೆಗಳ ನಡುವೆ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Tags: