ಚಾಮರಾಜನಗರ: ಜಿಲ್ಲೆಯ ಪುಣಜನೂರು ಅರಣ್ಯ ವ್ಯಾಪ್ತಿಯ ಬೇಡುಗೊಳಿ ಎಸ್ಟೇಟ್‌ನಲ್ಲಿ ತಾಯಿಯಿಂದ ಬೇರ್ಪಟ್ಟ ಮೂರು ಹುಲಿ ಮರಿಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಿಗಳನ್ನು ಸ್ಪರ್ಶಿಸಿದ್ದ ಎನ್‌ಜಿಓಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಅಕ್ಟೋಬರ್.15ರಂದು ತಾಯಿಯಿಂದ ಬೇರ್ಪಟ್ಟ ಮೂರು ಹುಲಿ ಮರಿಗಳು ಪತ್ತೆಯಾಗಿದ್ದವು. ಈ ವೇಳೆ ಎನ್‌ಜಿಓಗೆ ಸೇರಿದ ಕೆಲವರು ಹುಲಿ ಮರಿಗಳನ್ನು ಕೈಯಲ್ಲಿ ಹಿಡಿದು ಸ್ಪರ್ಶಿಸಿ, ವಿಡಿಯೋ ಚಿತ್ರೀಕರಣ ಮಾಡಿದ್ದರು.
ಇದನ್ನು ಓದಿ: 2 ದಿನಗಳಲ್ಲಿ 3 ಹುಲಿ ಮರಿಗಳು ಪತ್ತೆ, ರಕ್ಷಣೆ ; ತಾಯಿ ಹುಲಿ ಪತ್ತೆಗೆ ಮುಂದುವರಿದ ಕೂಂಬಿಂಗ್
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಳ್ಳಿ ಅವರು ಈ ಕಾನೂನು ಉಲ್ಲಂಘನೆ ಕುರಿತು ಅರಣ್ಯ ಸಚಿವರಿಗೆ ಇಮೇಲ್ ಹಾಗೂ ಪತ್ರದ ಮೂಲಕ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.





