Mysore
21
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಅಪಘಾತ | ಬೈಕ್‌ ಸವಾರ ಸಾವು, ಪಾದಚಾರಿ ಗಂಭೀರ

ಕೊಳ್ಳೇಗಾಲ : ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮದ ರಸ್ತೆಯಲ್ಲಿ ಪಾದಚಾರಿ ಅಡ್ಡಬಂದಾಗ ಆಯಾತಪ್ಪಿ ಬಿದ್ದ ಬೈಕ್‌ನ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಬೈಕ್‌ ಸವಾರ ಹಾಗೂ ಪದಚಾರಿ ಗಂಭೀರವಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಮ.ಬೆಟ್ಟದಿಂದ ಪೂಜೆ ಮುಗಿಸಿ ವಾಪಸ್ಸು ಬರುವಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: ಅಪಘಾತ : ಕೂಲಿಯಾಳು ಸಾವು, 6ಮಂದಿ ಕಾರ್ಮಿಕರು ಗಂಭೀರ

ಮೃತ್ತ ವ್ಯಕ್ತಿ ಮಳ್ಳವಳ್ಳಿ ತಾಲ್ಲೂಕು ರಾವಂದೂರು ಗ್ರಾಮದ ಮನೋಹರ್(18) ಎನ್ನಲಾಗಿದೆ. ಗಾಯಗೊಂಡ ಬೈಕ್ ಸವಾರ ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದ ರವಿಕುಮಾರ್ ಹಾಗೂ ಪಾದಚಾರಿ ಕಾಮಗೆರೆ ಗ್ರಾಮದ ಸುರೇಶ್ ಎಂದು ಗುರುತಿಸಲಾಗಿದೆ.

ಮೃತ್ತ ವ್ಯಕ್ತಿ ಹಾಗೂ ಬೈಕ್ ಸವಾರರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ರಜಾದಿನವಾದ್ದರಿಂದ ಮ.ಬೆಟ್ಟಕ್ಕೆ ಬಂದು ದರ್ಶನ ಮುಗಿಸಿ ವಾಪಸ್ಸು ಹೋಗುವಾಗ ಈ ದುರಂತ ಜರುಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:
error: Content is protected !!