Mysore
22
overcast clouds

Social Media

ಶುಕ್ರವಾರ, 25 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಓದುಗರ ಪತ್ರ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಐರನ್ ಮಾಡುವವರು, ಟೈಲಗರ್‌ಳು, ಸಲೂನ್‌ನವರು ಹಾಗೂ ಸಣ್ಣ ಕೈಗಾರಿಕೆಗಳು ಮತ್ತು ಸಣ್ಣಪುಟ್ಟ ವ್ಯಾಪಾರಿಗಳ ಕೆಲಸ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಮನೆಗಳಲ್ಲಿ ಎದುರಾಗುವ ಸಮಸ್ಯೆಗಳುನ್ನು ಹೇಳುವಂತೆಯೇ ಇಲ್ಲ. ಅಲ್ಲದೆ, ವರ್ಕ್ ಫ್ರಮ್ ಹೋಮ’ ಮಾಡುವ ಉದ್ಯೋಗಿಗಳಿಗೆ ಲ್ಯಾಪ್‌ಟಾಪ್ ಚಾರ್ಜಿಂಗ್ ಸಮಸ್ಯೆ ಎದುರಾಗುತ್ತದೆ. ಯಾವ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳುತ್ತದೆ ಮತ್ತು ಪುನಃ ಯಾವಾಗ ಬರುತ್ತದೆ ಎಂಬ ಮಾಹಿತಿಯನ್ನು ಸ್ಥಳೀಯ ದಿನಪತ್ರಿಕೆಗಳು ಹಾಗೂ ಆಕಾಶವಾಣಿಯಲ್ಲಿ (ರೇಡಿಯೋ) ಮುಂಚಿತವಾಗಿಯೇ ಪ್ರಕಟಿಸಬೇಕು. ಮುಖ್ಯವಾಗಿ ದಿನವೂ ಮನೆ ಮನೆಗೆ ಬರುವ ಕಸ ಸಂಗ್ರಹಣಾ ವಾಹನಗಳ’ ಧ್ವನಿವರ್ಧಕಗಳ ಮೂಲಕ ಜನರಿಗೆ ಮಾಹಿತಿ ನೀಡಿದರೆ ಹೆಚ್ಚು ಅನುಕೂಲ. ಈ ಮಾಹಿತಿ ಎಲ್ಲರಿಗೂ ಸುಲಭವಾಗಿ ತಲುಪುತ್ತದೆ. ವಿದ್ಯುತ್ ಸರಬರಾಜು ಮಂಡಳಿ ಸಂಬಂಧಪಟ್ಟ ಅಽಕಾರಿಗಳು ಇತ್ತ ಗಮನ ಹರಿಸಲಿ.

-ಬಿ.ಗಣೇಶ, ಮೈಸೂರು

Tags:
error: Content is protected !!