ಮಂಡ್ಯ: ತಾಲ್ಲೂಕಿನ ಶಿವಾರ ಗ್ರಾಮದಲ್ಲಿ ವಿ.ಸಿ.ಫಾರಂನ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಶಿಬಿರದಲ್ಲಿ ಪಾಲ್ಗೊಂಡು ಜಾನುವಾರುಗಳಿಗೆ ಲಸಿಕೆ ಹಾಕಿ, ರೈತರಲ್ಲಿ ಜಾಗೃತಿ ಮೂಡಿಸಿದರು.
ಶಿಬಿರದಲ್ಲಿ ಕೃಷಿ ಡೀನ್ ಡಾ.ಎಸ್.ಎಸ್.ಪ್ರಕಾಶ್, ಶಿಬಿರದ ಸಂಯೋಜಕ ಡಾ.ವಿ.ಡಿ.ರಂಗನಾಥ್ ಅವರ ಮಾರ್ಗದರ್ಶನದಲ್ಲಿ ಪಶು ವೈದ್ಯ ಡಾ.ವಿ.ಎಸ್.ಲೋಕೇಶ್ ಬಾಬು, ತೋಟಗಾರಿಕೆ ವಿಭಾಗದ ವೆಂಕಟೇಶ್, ಸಹ ಸಂಯೋಜಕರಾದ ಅನುಷ ಕಾರ್ಯಕ್ರಮಕ್ಕೆ ಚಾಲನೆ ನೀಡದರು.
ಶಿಬಿರದಲ್ಲಿ ಸುವಾರು 100 ಜಾನುವಾರುಗಳಿಗೆ ಚುಚ್ಚುಮದ್ದು ನೀಡಲಾಯಿತು. ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ರೈತರಿಗೆ ಅಗತ್ಯ ಮಾಹಿತಿ ನೀಡಿದರು.
ಶಿಬಿರಾರ್ಥಿಗಳಾದ ಕೆ.ಧೀಕ್ಷಿತ, ಸುದೀಪ್‌ಗೌಡ, ಎಲ್.ಪ್ರಜ್ವಲ್, ಸೌಮ್ಯ, ಮೇರಿ, ನವ್ಯ, ರತ್ನಪ್ರಭ, ಸೈಯದ್ ಕಲೀಮ್, ಕಾರ್ತಿಕ್, ನಂಜಯ್ಯ, ಗೋಪಿಚಂದ್ರ ಪಾಲ್ಗೊಂಡಿದ್ದರು.