ನಂಜನಗೂಡು : ಜಿಲ್ಲೆಯಾದ್ಯಂತ ಸಂವಿಧಾನದ ಆಶಯಗಳನ್ನು ಹೊತ್ತು ಸಾಗುತ್ತಿರುವ ‘ಸಂವಿಧಾನ ಜಾಗೃತಿ ಜಾಥಾ ಕ್ಕೆ ನಂಜನಗೂಡು ತಾಲ್ಲೂಕು ಶಿರಮಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭೂತಪೂರ್ವ ಸ್ವಾಗತ ದೊರೆಯಿತು.
ರಸ್ತೆಯ ಎರಡೂ ಬದಿಗಳಲ್ಲಿ ನಿಂತ ವಿದ್ಯಾರ್ಥಿಗಳು ಅಂಬೇಡ್ಕರರ ಪುತಥಳಿಗೆ ಹೂಮಳೆಗರೆದರು. ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ತಬ್ಧ ಚಿತ್ರಗಳನ್ನು ಬರಮಾಡಿಕೊಂಡರು.
ಶಾಲಾ ಕಾಲೇಜು ವಿದ್ಯಾರ್ಥಿಗಳು,ಜನಪ್ರತಿನಿಧಿಗಳು,ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು,ವಿವಿಧ ಸಂಫ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು