Mysore
28
overcast clouds

Social Media

ಮಂಗಳವಾರ, 01 ಸೆಪ್ಟೆಂಬರ್ 2026
Light
Dark

ಕಾಂಗ್ರೆಸ್‌ನಲ್ಲಿ ಡ್ರೈವರ್‌ ಬದಲಾಗಿದ್ದಾರೆ, ಬಸ್‌, ಎಂಜಿನ್‌ ಕೆಟ್ಟು ಹೋಗಿದೆ: ಆರ್.ಅಶೋಕ್‌ ವ್ಯಂಗ್ಯ

R Ashok

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಡ್ರೈವರ್‌ ಬದಲಾಗಿದ್ದಾರೆ ಅಷ್ಟೇ. ಬಸ್‌, ಎಂಜಿನ್‌ ಕೆಟ್ಟು ಹೋಗಿದೆ ಎಂದು ವಿಪಕ್ಷ ನಾಯಕ ಆರ್.‌ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರೈವರ್‌ ಬದಲಾದರೇನು? ಕೆಟ್ಟು ಹೋಗಿರೋ ಬಸ್‌ ಓಡಲು ಸಾಧ್ಯವೇ? ಇದು ಕೆಟ್ಟು ಹೋಗಿರೋ ಗಾಡಿ. ಸಿದ್ದರಾಮಯ್ಯ ಅವರು ಕೆಟ್ಟು ಹೋಗಿರೋ ಗಾಡಿ ಡಿಕೆಶಿಗೆ ಕೊಟ್ಟಿದ್ದಾರೆ. ಸಾಲ ಮಾಡಿ ಡೀಸೆಲ್‌ ಹಾಕಿಸುವ ಬಸ್‌ ಅನ್ನು ಸಿದ್ದರಾಮಯ್ಯ ಡಿಕೆಶಿಗೆ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ನಾನು ಅಹಿಂದ ನಾಯಕ ಅಂತಿದ್ದರು. ದೇಶದಲ್ಲಿ ನಾನೊಬ್ಬನೇ ಅಹಿಂದ ಸಿಎಂ ಇರೋದ ಅಂತ ಹೇಳುತ್ತಾ ಇದ್ದರು. ನನ್ನನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂದು ಕಾನ್ಫಿಡೆನ್ಸ್‌ನಲ್ಲಿ ಇದ್ದರು. ರಾಹುಲ್‌ ಗಾಂಧಿ ಕಿತಾಪತಿಯಿಂದ ಈಗ ಸ್ಥಾನ ಹೋಗಿದೆ ಎಂದು ಆರೋಪಿಸಿದ್ದಾರೆ.

Tags:
error: Content is protected !!