Mysore
27
scattered clouds

Social Media

ಮಂಗಳವಾರ, 16 ಜೂನ್ 2026
Light
Dark

ಮಡಿಕೇರಿ| ಹುಲಿ ದಾಳಿಗೆ ಜಾನುವಾರು ಬಲಿ

ಮಡಿಕೇರಿ: ತಾಲ್ಲೂಕಿನ ಕತ್ತಲೆಕಾಡು ಗ್ರಾಮದಲ್ಲಿ ವನ್ಯಪ್ರಾಣಿ ದಾಳಿಗೆ ಜಾನುವಾರು ಬಲಿಯಾಗಿದ್ದು, ಹುಲಿ ದಾಳಿಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮದ ಆನಂದ ಎಂಬುವವರು ಎತ್ತು ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ನಿನ್ನೆ ಸಂಜೆ ಎತ್ತಿನ ಕಳೇಬರ ಪತ್ತೆಯಾಗಿದೆ. ಪಕ್ಕದಲ್ಲಿ ಕಾಡುಹಂದಿಯ ಕಳೇಬರ ಕೂಡ ಪತ್ತೆಯಾಗಿದೆ. ಮೇಲ್ನೋಟಕ್ಕೆ ಹುಲಿ ದಾಳಿ ಮಾಡಿರುವ ರೀತಿ ಕಂಡುಬಂದಿದೆ.

ಯಾವ ಪ್ರಾಣಿಯ ದಾಳಿಯಿಂದ ಜಾನುವಾರು ಮೃತಪಟ್ಟಿದೆ ಎಂಬುದು ವೈದ್ಯರ ಪರೀಕ್ಷೆಯಿಂದ ಬಯಲಾಗಬೇಕಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Tags:
error: Content is protected !!