Mysore
22
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ ನಡೆದಿದೆ.

ಗುರುವಾರ ತಾಲೂಕಿನ ಉಸ್ಗೂರಿನ ಚಂದ್ರಕಾಂತ ವ್ಯವಹಾರದ ನಿಮ್ಮಿತ್ತ ನಗರದ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಹಣವನ್ನು ಸ್ಕೂಟಿಯಲ್ಲಿಟ್ಟುಕೊಂಡು ತಾಲೂಕು ಆಡಳಿತ ಸೌಧದ ಸಮೀಪದ ಸದಾ ಜನಸಂಚಾರವಿರುವ ಪತ್ರಬರಹಗಾರರ ಕಾರ್ಯಾಲಯದ ಬಾಗಿಲಲ್ಲಿ ವಾಹನ ನಿಲ್ಲಿಸಿ ಒಳಗಿದ್ದ ಹಣದಲ್ಲಿ ೫೦.೦೦೦ ರೂಗಳನ್ನು ಸ್ಕೂಟಿಯಲ್ಲಿಟ್ಟು ಲಾಕ್ ಮಾಡಿ ಉಳಿದ ಹಣವನ್ನು ಎತ್ತಿಕೊಂಡು ಪತ್ರ ಬರೆಸಲು ಒಳಗೆ ತೆರಳಿದ್ದರು.

ಕಾರ್ಯಾಲಯದ ಒಳ ಹೋಗಿ ಅವರು ಹೊರಬರುವ ವೇಳೆಗೆ ಸ್ಕೂಟಿಯ ಡಿಕ್ಕಿ ತೆರದು ಹಣ ಕಳವು ಮಾಡಲಾಗಿತ್ತು ಈ ಘಟನೆಯಿಂದ ಕಂಗಾಲದ ಚಂದ್ರು ಹಾಗೂ ಪತ್ರ ಬರಹಗಾರ ನಾಗರಾಜ ಅರಸು ಅದೇ ಕಟ್ಟಡದಲ್ಲಿದ್ದ ಸಿ ಸಿ ಟಿ ವಿ ಯನ್ನು ಪರಿಶಿಲನೆಗೆ ಒಳಪಡಿಸಿದಾಗ ಮೂವರು ಚೋರರು ಸ್ಕೂಟಿ ಬಳಿ ಬಂದು ಅದರ ಅಕ್ಕಪ್ಪಕ್ಕ ನಿಂತು ಕೆಲವೇ ಕ್ಷಣದಲ್ಲಿ ಡಿಕ್ಕಿ ಎತ್ತಿ ಕೈಬೆರಳುಗಳನ್ನು ಒಳಗೆ ತೂರಿಸಿ ಹಣ ಕದ್ದು ಪರಾರಿಯಾದ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ . ನಂತರ ಚಂದ್ರು ಪಟ್ಟಣ ಠಾಣೆಗೆ ಹೋಗಿ ಹಣಕಳ್ಳತನವಾದ ಕುರಿತು ದೂರು ನೀಡಿದ್ದೂ ಅಲ್ಲದೆ ಸಿ ಸಿ ಟಿ ವಿಯ ದೃಶ್ಯವಳಿಗಳ ನೀಡಿದ್ದಾರೆ.   ಕಳ್ಳರ ಪತ್ತೆಗೆ ನಂಜನಗೂಡು ಪೊಲೀಸರೀಗ ಬಲೆ ಬೀಸಿದ್ದಾರೆ.

ವರದಿ : ಎಸ್.ಎಸ್.ಭಟ್‌

 

Tags:
error: Content is protected !!