ಮೈಸೂರು : 2021-2022 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮೈಸೂರು ಜಿಲ್ಲೆಯ ಒಂಬತ್ತು ತಾಲ್ಲೂಕುಗಳಿಂದ ತಲಾ ಒಂದೊಂದು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಮೈಸೂರು ತಾಲ್ಲೂಕಿನ ನಾಗವಾಲ, ನಂಜನಗೂಡು ತಾಲ್ಲೂಕಿನ ಕೋಣನೂರು, ತಿ.ನರಸೀಪುರ ತಾಲ್ಲೂಕಿನ ಕಲಿಯೂರು, ಹುಣಸೂರು ತಾಲ್ಲೂಕಿನ ಬಿಳಿಕೆರೆ, ಕೆ.ಆರ್.ನಗರ ತಾಲ್ಲೂಕಿನ ಹೊಸ ಅಗ್ರಹಾರ, ಸಾಲಿಗ್ರಾಮ ತಾಲ್ಲೂಕಿನ ಸಾಲಿಗ್ರಾಮ, ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ, ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ, ಸರಗೂರು ತಾಲ್ಲೂಕಿನ ಕೆ.ಬೆಳತ್ತೂರು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ.
ಪ್ರತಿ ತಾಲ್ಲೂಕಿಗೆ ತಲಾ ಒಂದು ಗ್ರಾಪಂಗಳನ್ನು ಆಯ್ಕೆಮಾಡಿ 2021-2022 ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕಾಗಿ ಶಿಫಾರಸ್ಸು ಮಾಡಲಾಗಿತ್ತು. ಅದರಂತೆ ಜಿಲೈ ತಿಂಗಳಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಎಲ್ಲಾ ನೋಡಲ್ ಅಧಿಕಾರಿಗಳು ನೀಡಿರುವ ಪರಿಶೀಲನಾ ವರದಿಯನ್ನು ಒಪ್ಪಿ ಆಯ್ಕೆ ಮಾಡಲಾಗಿದೆ.