ನವದೆಹಲಿ: ವಾಯವ್ಯ ಚೀನಾದ ಗನ್ನು- ಕ್ವಿಂಫೈ ಗಡಿಯಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಭಾರಿ ಪ್ರಮಾಣದ ಸಾವು ನೋವುಗಳುಂಟಾಗಿರುವ ಬಗ್ಗೆ ವರದಿಯಾಗಿದೆ. ಅಪಾರ ಪ್ರಮಾಣದ ಆಸ್ತಿಗಳಿಗೂ ವ್ಯಾಪಕ ಹಾನಿಯಾಗಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.1ರಷ್ಟಿತ್ತು ಎಂದು ಮೂಲಗಳು ಹೇಳಿವೆ. …










