ವಿಕಿಪೀಡಿಯಾ ಸಹಸಂಸ್ಥಾಪಕರಾದ ಜಿಮ್ಮಿ ವೇಲ್ಸ್ ಅವರು ಚಾಟ್ ಜಿಪಿಟಿ ಬಗ್ಗೆ ಮಾತನಾಡಿದ್ದು, ಚಾಟ್ ಜಿಪಿಟಿ ಬಹಳ ಕೆಟ್ಟದ್ದು, ಇದರಿಂದ ಜ್ಞಾನ ನಾಶವಾಗುತ್ತದೆ ಎಂದು ವಿಕಿಪೀಡಿಯಾ ಸಹಸಂಸ್ಥಾಪಕ ಅಭಿಪ್ರಾಯಪಟ್ಟಿದ್ದಾರೆ.
ಪೋರ್ಚುಗಲ್‌ನಲ್ಲಿ ಆಯೋಜಿಸಲಾಗಿದ್ದ ವೆಬ್ ಶೃಂಗಸಭೆ 2023ರಲ್ಲಿ ಚಾಟ್ ಜಿಪಿಟಿ ಬಗ್ಗೆ ಮಾತನಾಡಿದ ಅವರು ಇಂತಹ ಕೃತಕ ಬುದ್ಧಮತ್ತೆಯ ಮಿತಿಗಳ ಬಗ್ಗೆ ವಿವರಿಸಿದ್ದಾರೆ, “ಚಾಟ್ ಜಿಪಿಟಿ ಆರಂಬದಲ್ಲಿ ಬಳಸಲು ಉತ್ತಮವೆನಿಸುತ್ತದೆ. ಬಳಸಲು ಆರಂಭಿಸಿದ ನಂತರ ಅದು ಕೆಟ್ಟದ್ದು ಎನಿಸಿಬಿಡುತ್ತದೆ, ಇದರಿಂದ ಸಂಶೋಧನಾ ಮನೊಭಾವ ಕುಂಠಿತಗೊಂಡಿದೆ, ಈ ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವಿದೆ” ಎಂದಿದ್ದಾರೆ.
ಜನರೇಟಿವ್ ಎಐ ಕಂಪನಿಗಳು ಸರಿಯಾದ ಕ್ರಮದಲ್ಲಿ ಪರಿಶೀಲನೆ ನಡೆಸಿ, ಅರ್ಹವಾಗಿ ಪರವಾನಗಿ ಪಡೆಯುತ್ತಿದ್ದಾರೆಯೇ ಎಂಬ ಆಕ್ಸಿಯೋನ್‌ನ ಹಿರಿಯ ಪತ್ರಕರ್ತರ ಪ್ರಶ್ನೆಗೆ, ” ಹೊಸ ತಂತ್ರಜ್ಞಾನಗಳು ಒಮ್ಮೆ ಬಂದು, ಅವುಗಳನ್ನು ನಾವು ಅಳವಡಿಸಿಕೊಂಡರೆ ಅದು ಸೋಮಾರಿತನವನ್ನು ಸೂಚಿಸುವ ಎಚ್ಚರಿಕೆಯನ್ನು ನೀಡುತ್ತದೆ. ಎಐಯ ಪರಿಶೀಲನೆಯು ಮುಂದಿನ ನವೀನ ತಂತ್ರಜ್ಞಾನಗಳ ಎಚ್ಚರಿಕೆಯ ಭಾಗವಾಗಿದೆ ಎಂದು ವೇಲ್ಸ್ ಹೇಳಿದ್ದಾರೆ.
ಚಾಟ್ ಜಿಪಿಟಿಯನ್ನು ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ವಾಸ್ತವಿಕವಾಗಿ ನಾವು ನೋಡಬೇಕಿದೆ. ಇದರಿಂದ ಡೇಟಾವನ್ನು ಹೆಚ್ಚು ಫಿಲ್ಟರ್ ಮಾಡಿದರೇ ಅದು ಸಾಮಾಜಿಕ ಮಾಧ್ಯಮದಂತಹ ಕಡಿಮೆ ಗುಣಮಟ್ಟದ ಮೂಲಗಳನ್ನು ತಪ್ಪಿಸಿ, ವಿವಿಧ ಕ್ಷೇತ್ರಗಳಿಗೆ ಹಾನಿಯನ್ನುಂಟು ಮಾಡಲಿದೆ ಎಂದು ಅವರು ಭಾವಿಸಿದ್ದಾರೆ.
ಏನಿದು ಚಾಟ್ ಜಿಪಿಟಿ?
ಇದೊಂದು ನವೀನ ತಂತ್ರಜ್ಞಾನವಾಗಿದೆ. ನಮಗೆ ಬೇಕಾದ ಸಮಗ್ರ ಮಾಹಿತಿಯ ಬಗ್ಗೆ ಒಂದು ಸಾಲಿನಲ್ಲಿ ಬರೆದರೆ ಚಾಟ್ ಜಿಪಿಟಿ ನಾವು ಕೇಳಿದಷ್ಟು ಪದಮಿತಿಯಲ್ಲಿ ಮಾಹಿತಿ ನೀಡಲಿದೆ. ಇದು ಅತಿ ನಿಖರವಾಗಿದ್ದು, ಇದನ್ನು ಬಳಸುವ ಮೂಲ ಉದ್ದೇಶವೇ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳುವುದಾಗಿದೆ. ಆದರೆ ಇದು ಜನರ ಜ್ಞಾನ ಸಂಪಾದನೆಗೆ ನೇರವಾಗಿಯೇ ಪೆಟ್ಟು ನೀಡುತ್ತಿದೆ.