Mysore
23
scattered clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

2018 ರಿಂದ ಇಲ್ಲಿಯವರೆಗೆ ವಿದೇಶಗಳಲ್ಲಿ ಮರಣ ಹೊಂದಿದ ಭಾರತೀಯ ವಿದ್ಯಾರ್ಥಿಗಳೆಷ್ಟು ಗೊತ್ತಾ?

ನವದೆಹಲಿ : ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ನೈಸರ್ಗಿಕ ಕಾರಣಗಳು ಮತ್ತು ಅಪಘಾತ ಸೇರಿದಂತೆ ೨೦೧೮ ರಿಂದ ಇದುವರೆಗೆ ೪೦೩ ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಒಟ್ಟು ೩೪ ರಾಷ್ಟ್ರಗಳಲ್ಲಿ ಭಾರತೀಯ ವಿದಾರ್ಥಿಗಳ ಸಾವಾಗಿದ್ದು, ಅದರಲ್ಲೂ ಕೆನಡಾ ದೇಶದಲ್ಲಿ ಹೆಚ್ಚು ಸಾವುಗಳು ಸಂಭವಿಸಿದೆ.

೨೦೧೮ ರಿಂದ ಇಲ್ಲಿಯವರೆಗೆ ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳು ೪೦೩ ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಚಿವ ವಿ ಮುರಳೀಧರನ್‌ ಅವರು ರಾಜ್ಯ ಸಭೆಯಲ್ಲಿ ಡೇಟಾ ಮಂಡಿಸಿದರು. ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯು ಭಾರತ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ್ದಲ್ಲಿ ಸರಿಯಾದ ತನಿಖೆ ಮತತು ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಅತಿಥೇಯ ದೇಶದ ಅಧಿಕಾರಿಗಳೊಂದಿಗೆ ತಕ್ಷಣವೇ ಮಾತನಾಡಲಾಗುವುದು.

ತುರ್ತು ವೈದ್ಯಕೀಯ ಆರೈಕೆ, ಬೋರ್ಡಿಂಗ್‌ ಮತ್ತು ಅಗತ್ಯ ವಸತಿ ಸೇವೆ ಒದಗಿಸಲು ಸಮಗ್ರ ಕಾನಸ್ಯಲರ್‌ ನೆರವು ನೀಡಲಾಗುತ್ತದೆ ಎಂದು ಅವರು ಹೇಳಿದರು.

ಈ ಮಾಹಿತಿಯ ಪ್ರಕಾರ ಕೆನಡಾದಲ್ಲಿ ಇದುವರೆಗೆ ಒಟ್ಟು ೯೧ ಭಾರತೀಯ ವಿದ್ಯಾರ್ಥಿಗಳು, ನಂತರದ ಸ್ಥಾನದಲ್ಲಿ ಯುನೈಟೆಡ್‌ ಕಿಂಗ್‌ಡಮ್‌ (ಯುಕೆ) ೪೮, ರಷ್ಯಾ ೪೦, ಯುನೈಟೆಡ್‌ ಸ್ಟೇಟ್ಸ್‌ ೩೬, ಆಸ್ಟ್ರೇಲಿಯಾ, ಉಕ್ರೇನ್‌ ೨೧, ಜರ್ಮನಿ ೨೦, ಸೈಪ್ರಸ್‌ ೧೪, ಇಟಲಿ ಮತ್ತು ಫಿಲಿಫೈನ್ಸ್‌ ದೇಶಗಳಲ್ಲಿ ತಲಾ ೧೦ ಮಂದಿ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!