Mysore
30
light rain

Social Media

ಬುಧವಾರ, 25 ನವೆಂಬರ್ 2026
Light
Dark

ಚುಂಚನಕಟ್ಟೆ ಸಮೀಪ ನಾಲೆಯಲ್ಲಿ ಮೊಸಳೆ ಪ್ರತ್ಯಕ್ಷ: ಬಲೆಹಾಕಿ ಸೆರೆಹಿಡಿದ ತಂಡ!

ಕೆ.ಆರ್‌.ನಗರ: ಇಲ್ಲಿನ ಚುಂಚನಕಟ್ಟೆ ಸಮೀಪದ ಮಾಳನಾಯಕನಹಳ್ಳಿ ಬಳಿ ಚಾಮರಾಜ ಎಡದಂಡೆಯ ಕಿರು ನಾಲೆಯಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಸೆರೆಹಿಡಿಯಲಾಗಿದೆ.

ಮೊಸಳೆಯನ್ನು ಗಮನಿಸಿದ ಚುಂಚನಕಟ್ಟೆ ನಿವಾಸಿ ಶರತ್‌, ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೊಸಳೆ ಹಿಡಿಯುವ ತಂಡದ ಸಾಲಿಗ್ರಾಮ ಮಹದೇವ ಹಾಗೂ ಈಜುಗಾರ ಕಪ್ಪಡಿ ಮಧು ಅವರನ್ನು ಸ್ಥಳಕ್ಕೆ ಕರೆಸಲಾಯಿತು.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರ ಉಪಸ್ಥಿತಿಯಲ್ಲಿ ಮಧು ಮತ್ತು ಸ್ನೇಹಿತರು ಬಲೆಹಾಕಿ ಮೊಸಳೆಯನ್ನು ಸೆರೆಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಮೊಸಳೆಗೆ ಆರೋಗ್ಯ ಪರೀಕ್ಷೆ ನಡೆಸಿ, ಡಿಸಿಎಫ್‌ ಅವರೊಂದಿಗೆ ಚರ್ಚಿಸಿದ ಬಳಿಕ ಕೆಆರ್‌ಎಸ್‌ ಹಿನ್ನೀರಿನಲ್ಲಿ ಬಿಡಲು ಉದ್ದೇಶಿಸಲಾಗಿದೆ ಎಂದು ಪ್ರಭಾರ ವಲಯ ಅರಣ್ಯಾಧಿಕಾರಿ ಎನ್‌.ಕೆ. ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಹಾಗೂ ಚಿರತೆ ಕಾರ್ಯಪಡೆ ಸಿಬ್ಬಂದಿ ಪಾಲ್ಗೊಂಡಿದ್ದರು.

Tags:
error: Content is protected !!