ಬೆಂಗಳೂರು : ಹಿರಿಯ ಚಲನಚಿತ್ರ ನಟ ದ್ವಾರಕೀಶ್ (81) ನಿಧನರಾಗಿದ್ದಾರೆ.
ನಗರದ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಇಂದು ಕೊನೆ ಉಸಿರೆಳೆದಿದ್ದಾರೆ. ಈ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೂ ದಾಖಲಾಗಿದ್ದರು.
ನಟ,ನಿರ್ಮಾಪಕ,ನಿರ್ದೇಶಕ ಸೇರಿದಂತೆ ಹಲವು ರೀತಿಯಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರು.
1942ರಲ್ಲಿ ಜನಿಸಿದ ದ್ವಾರಕೀಶ್ ಅವರು 1963ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ರಾಜ್‌ಕುಮಾರ್ , ವಿಷ್ಟುವರ್ಧನ್, ಅಂಬರೀಷ್, ಪ್ರಭಾಕರ್, ಅನಂತ್‌ನಾಗ್, ಶಂಕರ್‌ನಾಗ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರೊಂದಿಗೆ ತೆರೆ ಹಂಚಿಕೊಂಡು ಚಿತ್ರ ಪ್ರೇಮಿಗಳ ಮನಗೆಲ್ಲುವ ಮೂಲಕ ಕರ್ನಾಟಕದ ಕುಳ್ಳ ಎಂದೇ ಪ್ರಸಿದ್ಧರಾಗಿದ್ದರು.