Mysore
22
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷರಾಗಿ ಸುನೀಲ್ ತಟ್ಕರೆ ನೇಮಿಸಿದ ಪ್ರಫುಲ್ ಪಟೇಲ್

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಕಾರ್ಯಾಧ್ಯಕ್ಷ ಸ್ಥಾನದಿಂದ ವಜಾಗೊಂಡ ಬೆನ್ನಲ್ಲೇ, ಪ್ರಫುಲ್ ಪಟೇಲ್ ಅವರು ಸೋಮವಾರ ಸಂಜೆ ಸಂಸದ ಸುನೀಲ್ ತಟ್ಕರೆ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿರುವುದಾಗಿ ಘೋಷಿಸಿದ್ದಾರೆ.

ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷರಾಗಿದ್ದ ಜಯಂತ್ ಪಾಟೀಲ್ ಅವರನ್ನು ವಜಾಗೊಳಿಸಿ, ಅವರ ಸ್ಥಾನ ತಟ್ಕರೆ ಅವರನ್ನು ನೇಮಕ ಮಾಡಲಾಗಿದೆ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಎನ್ ಸಿಪಿ ಶಾಸಕಾಂಗ ಪಕ್ಷಧ ನಾಯಕರನ್ನಾಗಿ ನೇಮಿಸಲಾಗಿದೆ.

ಇದಕ್ಕೂ ಮೊದಲು, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಪಕ್ಷದ ವಿರುದ್ಧ ಬಂಡಾಯವೆದ್ದ ಅಜಿತ್ ಪವಾರ್ ಪರ ನಿಂತ ಪ್ರಫುಲ್ ಪಟೇಲ್ ಮತ್ತು ತಟ್ಕರೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು.

ಕಳೆದ ತಿಂಗಳು ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ರಾಜ್ಯಸಭಾ ಸದಸ್ಯ ಪಟೇಲ್ ಅವರು ಮುಂಬೈನಲ್ಲಿ ಪತ್ರಿಕಾಗೋಷ್ಠಿಯ ನಡೆಸಿ, ತಟ್ಕರೆ ಅವರಿಗೆ ಅಧಿಕಾರ ಹಸ್ತಾಂತರಿಸುವಂತೆ ಜಯಂತ್ ಪಾಟೀಲ್ ಅವರಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಅಜಿತ್ ಪವಾರ್ ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗಲಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ.

“ಇಂದು ಗುರು ಪೂರ್ಣಿಮೆ; ಶರದ್ ಪವಾರ್ ನಮ್ಮನ್ನು ಆಶೀರ್ವದಿಸಲಿ ಎಂದು ನಾವೆಲ್ಲರೂ ಬಯಸುತ್ತೇವೆ” ಎಂದು ಪಟೇಲ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು, ತಮ್ಮೊಂದಿಗೆ ಅತಿ ಹೆಚ್ಚು ಎನ್‌ಸಿಪಿ ಶಾಸಕರು ಇದ್ದು, ಪಕ್ಷದ ಇತರ ಶಾಸಕರಾದ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವದ್ ಅವರನ್ನು ಅನರ್ಹಗೊಳಿಸುವಂತೆ ವಿಧಾನಸಭಾ ಸ್ಪೀಕರ್‌ಗೆ ಪತ್ರ ನೀಡಿರುವುದಾಗಿ ತಿಳಿಸಿದ್ದಾರೆ.

ಪಕ್ಷ ಮತ್ತು ಶಾಸಕರು ತಮ್ಮೊಂದಿಗಿದ್ದು, ತಮ್ಮ ಹಾಗೂ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂಟು ಸಚಿವರ ಅನರ್ಹತೆಗೆ ನೋಟಿಸ್ ನೀಡಿರುವುದು ಅರ್ಥಹೀನ ಎಂದು ಅಜಿತ್ ಪವಾರ್ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ