Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಬೆಂಗಳೂರಿನ ಐಐಎಸ್​ಸಿಗೆ ದೇಶದ ನಂಬರ್​​ 1 ವಿವಿ ಹೆಗ್ಗಳಿಕೆ

ನವದೆಹಲಿ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 2023ನೇ ಸಾಲಿನ ನ್ಯಾಷನಲ್ ರ್ಯಾಂಕಿಂಗ್ ಫ್ರೇಮ್​ವರ್ಕ್ (ಎನ್​ಐಆರ್​ಎಫ್) ಶ್ರೇಯಾಂಕ ಪಟ್ಟಿಯಲ್ಲಿ ಸಿಲಿಕಾನ್​ ಸಿಟಿ ಬೆಂಗಳೂರಿನ ಇಂಡಿಯನ್ ಇನ್​​ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್​ಸಿ) ದೇಶದ ನಂಬರ್​ 1 ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಅಲ್ಲದೇ, ಎಲ್ಲ ವಿಭಾಗಗಳ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿದೆ. ಇಂದು ದೆಹಲಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಡಾ. ರಾಜ್‌ಕುಮಾರ್ ರಂಜನ್ ಸಿಂಗ್ ಅವರು ಈ ಮಾಹಿತಿ ಹಂಚಿಕೊಂಡರು. ನ್ಯಾಷನಲ್ ರ್ಯಾಂಕಿಂಗ್ ಫ್ರೇಮ್​ವರ್ಕ್ (ಎನ್​ಐಆರ್​ಎಫ್) ಶ್ರೇಯಾಂಕದಲ್ಲಿ ತಮಿಳುನಾಡಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್​ (ಐಐಎಸ್​ಸಿ) ದೇಶದಲ್ಲಿಯೇ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.

ಟಾಪ್​ ಯೂನಿವರ್ಸಿಟಿ ಶ್ರೇಯಾಂಕ: ಎನ್​ಐಆರ್​ಎಫ್​ ಶ್ರೇಯಾಂಕದ ದೇಶದ ಟಾಪ್​ 10 ಯೂನಿವರ್ಸಿಟಿಗಳಲ್ಲಿ ಬೆಂಗಳೂರಿನ ಇಂಡಿಯನ್ಸ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ ಶಿಕ್ಷಣ ಸಂಸ್ಥೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಜವಾಹರ್​ಲಾಲ್​ ನೆಹರೂ ವಿಶ್ವವಿದ್ಯಾಲಯ ಎರಡನೇ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮೂರನೇ ಸ್ಥಾನದಲ್ಲಿದೆ. ಹೈದರಾಬಾದ್​ ವಿವಿಗೆ ಕೊನೆಯ ಸ್ಥಾನ ಸಿಕ್ಕಿದೆ.

ಒಟ್ಟಾರೆ ವಿಭಾಗದ ಶ್ರೇಯಾಂಕ: ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳ ಗುಣಮಟ್ಟ, ಸೌಲಭ್ಯಗಳ ಪಟ್ಟಿಯಲ್ಲಿ ತಮಿಳುನಾಡಿನ ಐಐಎಸ್​ಸಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಇದು ಕಳೆದ ಬಾರಿಯೂ ಅಗ್ರಸ್ಥಾನದಲ್ಲಿತ್ತು. ಬೆಂಗಳೂರಿನ ಐಐಎಸ್​ಸಿ ಇದರಲ್ಲಿ 2 ನೇ ಸ್ಥಾನದಲ್ಲಿದ್ದರೆ, ದೆಹಲಿ ಐಐಎಸ್​ಸಿ ಮೂರನೇ ಶ್ರೇಯ ಪಡೆದಿದೆ. ದೆಹಲಿಯ ಇನ್ನೊಂದು ಶಿಕ್ಷಣ ಸಂಸ್ಥೆಯಾದ ಜವಾಹರ್​ಲಾಲ್​​ ನೆಹರೂ ವಿವಿ ಕೊನೆಯ ಶ್ರೇಯಾಂಕದಲ್ಲಿದೆ.

ಟಾಪ್​ ಎಂಜಿನಿಯರಿಂಗ್​ ಸಂಸ್ಥೆ: ದೇಶದ ಟಾಪ್​ 10 ಉತ್ತಮ ಎಂಜಿನಿಯರಿಂಗ್​ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯಲ್ಲಿ ತಮಿಳುನಾಡಿನ ಮದ್ರಾಸ್​ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಮೊದಲ ಸ್ಥಾನ ಗಳಿಸಿದೆ. ದೆಹಲಿ ಐಐಟಿ, ಬಾಂಬೆ ಐಐಟಿ ನಂತರದ ಸ್ಥಾನಗಳಲ್ಲಿವೆ. ಪಶ್ಚಿಮಬಂಗಾಳದ ಜಾದವ್​ಪುರ ವಿವಿ ಕೊನೆಯಲ್ಲಿದೆ. 2023 ನೇ ಸಾಲಿನ ಎನ್​ಐಆರ್​ಎಫ್​ ಶ್ರೇಯಾಂಕ ಪಟ್ಟಿಯು nirfindia.org ನಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಡಾ.ರಾಧಾಕೃಷ್ಣನ್ ಸಮಿತಿಯನ್ನು ಶಿಕ್ಷಣ ಸಚಿವಾಲಯವು ಮೌಲ್ಯಮಾಪನದ ಮಾನ್ಯತೆ ನಿಯತಾಂಕಗಳನ್ನು ಪರಿಶೀಲಿಸಲು ಸ್ಥಾಪಿಸಿತ್ತು. ಎಲ್ಲಾ ಶಿಕ್ಷಣ ಸಂಸ್ಥೆಗಳ ಡೇಟಾ ಬೆರಳ ತುದಿಯಲ್ಲಿ ಲಭ್ಯವಿರುತ್ತದೆ. ಒಂದು ರಾಷ್ಟ್ರ ಒಂದು ದತ್ತಾಂಶ ನಡೆಯುತ್ತಿದೆ ಎಂದು ನ್ಯಾಷನಲ್ ಅಸೆಸ್‌ಮೆಂಟ್ ಅಂಡ್ ಅಕ್ರೆಡಿಟೇಶನ್ ಕೌನ್ಸಿಲ್ ಎಜುಕೇಶನಲ್ (NAAC) ನ ಅಧ್ಯಕ್ಷರಾದ ಅನಿಲ್ ಸಹಸ್ರಬುದ್ಧೆ ಹೇಳಿದ್ದಾರೆ.

ಎನ್​ಐಆರ್​ಎಫ್​ ಅನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿತ್ತು. 8 ನೇ ಆವೃತ್ತಿಯೊಂದಿಗೆ ನಾವು ಈಗ 8 ವಿಷಯ- ನಿರ್ದಿಷ್ಟ ಶ್ರೇಯಾಂಕಗಳನ್ನು ಒಳಗೊಂಡಂತೆ 12 ವಿಭಾಗಗಳನ್ನು ಹೊಂದಿದ್ದೇವೆ ಎಂದು ಕಾರ್ಯದರ್ಶಿ ಅನಿಲ್ ಕುಮಾರ್ ನಸ್ಸಾ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ