Mysore
22
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ಬೆಳ್ಳಂಬೆಳಗ್ಗೆ ದಸರಾ ವಸ್ತುಪ್ರದರ್ಶನ ಪ್ರಾಧಿಕಾರ ಕಟ್ಟಡದಲ್ಲಿ ಬೆಂಕಿ

ಮಹಿಳಾ ಮತ್ತು ಮಕ್ಕಳ ವಿಭಾಗದ ಕೊಠಡಿಯಲ್ಲಿದ್ದ ಪೀಠೋಪಕರಣ ಭಸ್ಮ

ಮೈಸೂರು: ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಕಟ್ಟಡದಲ್ಲಿ ಬೆಳಗ್ಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿ ಶಾಮಕ ದಳದ ತಂಡಗಳು ಸುಮಾರು ಅರ್ಧಗಂಟೆ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ.

ಬೆಳಗ್ಗಿನ ಜಾವ ಆರು ಗಂಟೆ ಸುಮಾರಿಗೆ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಹಳೇ ಪ್ರಾಧಿಕಾರ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭದ್ರತಾ ಸಿಬ್ಬಂದಿ, ವಾಹನ ಚಾಲಕರು ಬೆಂಕಿಯನ್ನು ಕಂಡು ತಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.

ಬೆಂಕಿ ದುರಂತದಲ್ಲಿ ಪೀಠೋಪಕರಣಗಳು,ಸೈಬರ್ ಟಿ.ವಿ., ಮಕ್ಕಳ ಡ್ರಾಯಿಂಗ್ ಪರಿಕರಗಳು ನಾಶವಾಗಿವೆ. ಅಗ್ನಿಶಾಮಕ ಠಾಣೆಗೆ ಕರೆ ಬಂದ ಮೇರೆಗೆ ಸುಮಾರು ಐದಾರು ಅಗ್ನಿಶಾಮಕ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಘಟನೆ ಸಂಬಂಧ ಆಂದೋಲನ ಡಿಜಿಟಲ್‌ ತಂಡಕ್ಕೆ ಮಾಹಿತಿ ನೀಡಿದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಅವರು, ಕಚೇರಿಯ ಟೇಬಲ್,ಕುರ್ಚಿ,ಸೈಬರ್ ಟಿ.ವಿ.,ಮಹಿಳಾ ಮತ್ತು ಮಕ್ಕಳ ವಿಭಾಗದ ಕೊಠಡಿಯಲ್ಲಿದ್ದ ಮೇಜು,ಕುರ್ಚಿ ಇತ್ಯಾದಿ ಪೀಠೋಪಕರಣಗಳು, ಮಕ್ಕಳ ಡ್ರಾಯಿಂಗ್ ಇತ್ಯಾದಿ ಪರಿಕರಗಳು ಸುಟ್ಟು ನಾಶವಾಗಿವೆ. ಎ ಮತ್ತು ಸಿ ಬ್ಲಾಕ್‌ ನಲ್ಲಿರುವ ವಸ್ತುಪ್ರದರ್ಶನ ಮಳಿಗೆಗಳಿಗೆ ಬೆಂಕಿ ಹರಡಿಲ್ಲ. ಹಳೆಯ ಕಟ್ಟಡವಾಗಿದ್ದು ಆಕಸ್ಮಿಕಕ್ಕೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಯಾವುದೇ ದಾಖಲೆಗಳು ನಾಶವಾಗಿಲ್ಲ ಎಂದವರು ಸ್ಪಷ್ಟಪಡಿಸಿದರು.
ನಜರಬಾದ್‌ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!