ಬೆಂಗಳೂರು: ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಮಾತಿನ ಚಕಮಕಿ ನಡೆದು ಸದನದಲ್ಲಿ ಬಜೆಪಿ ಶಾಸಕರು ವಿಧಾನಸಭೆ ಉಪಾಧ್ಯಕ್ಷರ ಮೇಲೆ ಕಾಗದ ಚೂರುಗಳನ್ನು ಎಸೆದು ತೂರಿದ ಘಟನೆ ನಡೆಯಿತು.
ಕೇಂದ್ರದ ವಿಪಕ್ಷಗಳ ಸಭೆಗೆ ಆಗಮಿಸಿದ್ದ ಗಣ್ಯರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿ, ದುರ್ಬಳಕೆ ಮಾಡಲಾಗಿತ್ತು ಎಂದು ಆರೋಪಿಸಿ, ಬುಧವಾರ ಸದನದ ಬಾವಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದ್ದು, ಈ ಹಿನ್ನೆಲೆ ಭೋಜನ ವಿರಾಮ ರದ್ದುಪಡಿಸಿ ಸ್ಪೀಕರ್ ಕಲಾಪ ಮುಂದುವರಿಸಿದರು.
ಬಳಿಕ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮಾತನಾಡುತ್ತಿದ್ದ ವೇಳೆ ಸದನದ ಬಾವಿಯಲ್ಲಿ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಏಕಾ ಏಕಿ ಉಪಸಭಾಧ್ಯಕ್ಷರ ಕುರ್ಚಿಯತ್ತ ವಿಧೇಯಕ ಪ್ರತಿಗಳನ್ನ ಹರಿದು ಎಸೆದಿದ್ದಾರೆ. ಇದಕ್ಕೆ ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಸೇರಿ ಸಚಿವರು, ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.