ಪ್ಯಾರಿಸ್‌ ಒಲಂಪಿಕ್ಸ್‌ಗೆ ಅರ್ಹತೆ ಪಡೆದ ಬಿಜೆಪಿ ಶಾಸಕಿ ಶ್ರೇಯಸಿ ಸಿಂಗ್‌!

ನವದೆಹಲಿ: ಇದೇ ಜುಲೈ 16ರಿಂದ ಆರಂಭವಾಗಲಿರುವ ಪ್ಯಾರಿಸ್‌ ಒಲಂಪಿಕ್ಸ್‌ 2024ಕ್ಕೆ ಬಿಜೆಪಿ ಶಾಸಕಿ ಶ್ರೇಯಸಿ ಸಿಂಗ್‌ ಅವರು ಆಯ್ಕೆಯಾಗಿದ್ದಾರೆ.

ಬಿಹಾರದ ಜಮುಯಿ ವಿಧಾಸಭಾ ಕ್ಷೇತ್ರದ ಬಿಜೆಪಿ ಶಾಸಕಿಯಾಗಿದ್ದಾರೆ ಶ್ರೇಯಸಿ. ಇವರು ಮಾಜಿ ಸಚಿವ ದಿವಂಗತ ದಿಗ್ವಿಜಯ್‌ ಸಿಂಗ್‌ ಅವರ ಪುತ್ರಿಯಾಗಿದ್ದಾರೆ. ಮತ್ತು ಬಿಹಾರದ ಮೂಲಕ ಒಲಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ವ್ಯಕ್ತಿ ಇವರಾಗಿದ್ದಾರೆ.

2014 ರಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಡಬಲ್‌ ಟ್ರ್ಯಾಪ್‌ ಶೂಟಿಂಗ್‌ನಲ್ಲಿ ಬೆಳ್ಳಿ ಹಾಗೂ 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಡಬಲ್‌ ಟ್ರ್ಯಾಪ್‌ ಈವೆಂಟ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಶೇಯಸಿ ಸಿಂಗ್‌ ಅವರಿಗೆ ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಆಡುವ ಸುವರ್ಣಾವಕಾಶ ಲಭಿಸಿದೆ.

ಮೊದಲಿಗೆ ಒಲಂಪಿಕ್ಸ್‌ ಆಯ್ಕೆ ಮಾಡಲಾದ ಪಟ್ಟಿಯಲ್ಲಿ ಶ್ರೇಯಸಿ ಸಿಂಗ್‌ ಹೆಸರು ಇರಲಿಲ್ಲ. ಮತ್ತೊಂದೆಡೆ ಮನು ಪ್ರಭಾಕರ್‌ ಅವರು ಏರ್‌ ಪಿಸ್ತೂಲ್‌ ಮತ್ತು ಸ್ಪೋರ್ಟ್‌ ಪಿಸ್ತೂಲ್‌ ಎರಡರಲ್ಲೂ ಅಗ್ರಸ್ಥಾನ ಗಳಿಸಿದ್ದರು. ಎರಡೂ ವಿಭಾಗಕ್ಕೂ ಆಯ್ಕೆಯಾಗಿದ್ದ ಮನು ಪ್ರಭಾಕರ್‌ ಒಂದೇ ಕೋಟಾದಡಿ ಸ್ಪರ್ಧಿಸಬಹುದಾಗಿತ್ತು. ಹೀಗಾಗಿ ಮನು ಪ್ರಭಾಕರ್‌ ಅವರ ಬಳಿಯಿದ್ದ ಕೋಟಾವನ್ನು ಟ್ರ್ಯಾಪ್‌ ಶೂಟರ್‌ಗಾಗಿ ಬದಲಾಯಿಸಲಾಯಿತು.

ಈ ಬದಲಾವಣೆ ಬಗ್ಗೆ ನ್ಯಾಷನಲ್‌ ರೈಫಲ್‌ ಪೆಡರೇಷನ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎನ್‌ಆರ್‌ಎಐ) ಇಂಟರ್‌ನ್ಯಾಷನಲ್‌ ಶೂಟಿಂಗ್‌ ಸ್ಪೋರ್ಟ್ಸ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌) ಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಈ ಮನವಿಯನ್ನು ಪುರಸ್ಕರಿಸಿದ್ದು, ಶ್ರೇಯಸಿ ಸಿಂಗ್‌ಗೆ ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ.