Mysore
22
light rain
Light
Dark

ರಜೆಯ ಮೇಲೆ ಮನೆಗೆ ತೆರಳಿದ್ದ ಸೈನಿಕನ ಅಪಹರಣ

ಕಾಶ್ಮೀರ : ರಜೆಯ ಮೇಲೆ ಮನೆಗೆ ತೆರಳಿದ್ದ 25 ವರ್ಷದ ಸೈನಿಕನನ್ನು ಅಪಹರಿಸಿರುವ ಘಟನೆ ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಅಚಾತಲ್ ಪ್ರದೇಶದ 25 ವರ್ಷದ ಯುವಕ ಜಾವಿದ್ ಅಹ್ಮದ್ ಎಂಬಾತನನ್ನು ಅಪಹರಿಸಿದ್ದು, ಶೋಧ ಕಾರ್ಯವನ್ನು ಸೈನಿಕರು ಮುಂದುವರೆಸಿದ್ದಾರೆ. ಪ್ರಸ್ತುತ ಜಮ್ಮು-ಕಾಶ್ಮೀರದ ಲಡಾಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾವಿದ್ ಅಹಮ್ಮದ್‍ವಾನಿ ಅವರನ್ನು ಕಳೆದ ರಾತ್ರಿ ಅಪಹರಿಸಲಾಗಿದೆ. ಅವರ ಕಾರು ಪರನ್ ಹಳ್ಳಿಯಲ್ಲಿ ಪತ್ತೆಯಾಗಿದ್ದು, ಪೋಷಕರು ಆತಂಕಗೊಂಡಿದ್ದಾರೆ.

ಇದೀಗ ಭಯೋತ್ಪಾದಕರು ಅಪಹರಿಸಿರುವ ಸಾಧ್ಯತೆ ಇರುವುದರಿಂದ ಸ್ಥಳೀಯ ಪೊಲೀಸರು ಮತ್ತು ಸೇನಾಪಡೆ ಕಳೆದ ರಾತ್ರಿಯಿಂದಲೇ ಶೋಧ ಕಾರ್ಯ ಮುಂದುವರೆಸಿದ್ದು, ಇಡೀ ಪ್ರದೇಶವನ್ನು ಸುತ್ತುವರೆದಿದೆ.

ಮನೆಗೆ ದಿನಸಿ ಸಾಮಾನುಗಳನ್ನು ತರಲು ಚೌಲಾಗಾಮ್ ಎಂಬಲ್ಲಿಗೆ ತೆರಳಿದ್ದರು. ಬಹು ಸಮಯದ ನಂತರ ಮನೆಗೆ ಹಿಂತಿರುಗದೇ ಇದ್ದಾಗ ಗಾಬರಿಗೊಂಡ ಪೊಷಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಲು ಪ್ರಾರಂಭಿಸಿದರು. ಕೊನೆಗೂ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.

ಶೋಧದ ವೇಳೆ ಪೆರನಲ್ ಗ್ರಾಮದ ಬಳಿ ಚಪ್ಪಲಿ ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ. ಇವು ಪೋಷಕರಿಗೆ ಆತಂಕ ಸೃಷ್ಟಿಸಿದೆ.
ಕಳೆದ ವರ್ಷ ನಿಷೇತ ಲಷ್ಕರ್-ಎ- ತೋಯ್ಬ ಸಂಘಟನೆಯು ಸಮೀರ್ ಅಹಮ್ಮದ್ ಮಲ್ಲ ಎಂಬ ಸೈನಿಕನನ್ನು ಅಪಹರಿಸಿ ಕೊಂದಿತ್ತು. ಸೈನಿಕರು ತೀವ್ರ ಶೋಧ ನಡೆಸಿದ ನಂತರ ಬುದ್ಗಾಂ ಜಿಲ್ಲೆಯ ತೋಟವೊಂದರಲ್ಲಿ ಶವ ಪತ್ತೆಯಾಗಿತ್ತು.
ಜಮ್ಮುಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸಮರ ಸಾರಿರುವ ಸೇನಾಪಡೆಗಳನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕರು ಆಗಾಗ್ಗೆ ಸೈನಿಕರನ್ನು ಅಪಹರಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು ಮತ್ತಿತರ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುತ್ತಲೇ ಇರುತ್ತಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ