Mysore
25
overcast clouds

Social Media

ಭಾನುವಾರ, 14 ಜೂನ್ 2026
Light
Dark

ಒಡಿಶಾದಲ್ಲಿ ಅಪರೂಪದ ಕಪ್ಪು ಹುಲಿ ಸಾವು

ಒಡಿಶಾ: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪಕ್ಕೆ ಕಾಣಸಿಗುತ್ತಿದ್ದ ಕಪ್ಪು ಹುಲಿಯು ಸಾವನ್ನಪಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಮಿಲಿಪಾಲ್ ನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಸುಶೀಲ್ ಕುಮಾರ್ ಪೊಪ್ಲಿ ಹುಲಿ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದು, ಸಿಮಿಲಿಪಾಲ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಪ್ರಿಲ್ 30ರ ಬೆಳಿಗ್ಗೆ ಸಿಮಿಲಿಪಾಲ್ ದಕ್ಷಿಣ ವಿಭಾಗದ ಸಿಬ್ಬಂದಿ ಬದಮಕ್ಕಬಾಡಿ ಬೀಟ್ ಪ್ರದೇಶದಲ್ಲಿ ಗಸ್ತು ತಿರುಗುವಾಗ ಹುಲಿಯ ಮೃತದೇಹವನ್ನು ಪತ್ತೆಯಾಗಿದ್ದು, ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.

ಟಿ-27 ಎಂದು ಗುರುತಿಸಲಾಗುತಿದ್ದ ಈ ಕಪ್ಪು ಹಲಿಯು ಸುಮಾರು 3.5-4 ವರ್ಷ ವಯಸ್ಸಿನದಾಗಿದ್ದು, ದೇಹದ ಮೇಲಿನ ಗಾಯಗಳ ಆಧಾರದ ಮೇಲೆ ಹುಲಿಯೂ ಮತ್ತೊಂದು ಹುಲಿಯೊಂದಿಗೆ ಕಾದಾಡಿ ಸಾವನ್ನಪಿರುವುದಾಗಿ ಶಂಕಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿಯ ಮೃತದೇಹವನ್ನು ಎನ್‌ಟಿಸಿಎ ಪ್ರತಿನಿಧಿ, ಜಂಟಿ ಕಾರ್ಯಪಡೆ (ಜೆಟಿಎಫ್) ಸದಸ್ಯರು, ಹುಲಿ ಸಂರ್ಕಷಿತ ಪ್ರದೇಶದ ನಿರ್ದೇಶಕರು, ಪಶುವೈದ್ಯರು ಮತ್ತು ಇತರ ಸಿಬ್ಬಂದಿ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!