Mysore
29
scattered clouds

Social Media

ಗುರುವಾರ, 19 ನವೆಂಬರ್ 2026
Light
Dark

ಊಟಿಯಲ್ಲಿ ಮೈಕೊರೆಯುವ ಚಳಿ, 5.9°Cಗೆ ಇಳಿದ ಕನಿಷ್ಠ ತಾಪಮಾನ!

ಊಟಿ: ಊಟಿಯಲ್ಲಿ ಮೈಕೊರೆಯುವ ಚಳಿ! ನೀಲಗಿರಿ ಜಿಲ್ಲೆಯ ಈ ಗಿರಿಧಾಮದಲ್ಲಿ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಗುರುವಾರ ಮುಂಜಾನೆ ಹುಲ್ಲುಗಾವಲು, ವಾಹನ, ಮರ ಮತ್ತು ಗಿಡಗಳ ಮೇಲೆ ಬಿಳಿ ಹಿಮಪದರ ಕಾಣಿಸಿಕೊಂಡಿದೆ. ನೀಲಗಿರಿಯಲ್ಲಿ ಸಾಮಾನ್ಯವಾಗಿ ಡಿಸೆಂಬರ್ 15ರ ಬಳಿಕ ಇಂಥ ದೃಶ್ಯ ಕಾಣಸಿಗುತ್ತದೆ. ಈ ಬಾರಿ ನವೆಂಬರ್‌ನಲ್ಲೇ ಹಿಮಪದರ ಮೂಡಿದ್ದು, ಸ್ಥಳೀಯರು ಮತ್ತು ಪ್ರವಾಸಿಗರಿಗೆ ಅಚ್ಚರಿ ಮೂಡಿಸಿದೆ.

Tags:
error: Content is protected !!