ಭಾರತೀಯ ಕ್ರಿಕೆಟ್ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ಗೆ ನಿವೃತ್ತಿ ಘೋಷಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾವನಾತ್ಮಕ ಕ್ಷಣವನ್ನು ಸೃಷ್ಟಿಸಿದೆ.
ಧೋನಿ ಎಂದರೆ ಕೇವಲ ಒಬ್ಬ ಕ್ರಿಕೆಟಿಗನಲ್ಲ, ಅವರು ನಾಯಕತ್ವ, ತಾಳ್ಮೆ, ಆತ್ಮವಿಶ್ವಾಸ ಮತ್ತು ಯಶಸ್ಸಿನ ಪ್ರತೀಕ. ತಮ್ಮ ವಿಶಿಷ್ಟ ನಾಯಕತ್ವದ ಮೂಲಕ ಭಾರತಕ್ಕೆ ೨೦೦೭ರ ಟಿ-೨೦ ವಿಶ್ವಕಪ್, ೨೦೧೧ರ ಏಕದಿನ ವಿಶ್ವಕಪ್ ಹಾಗೂ ೨೦೧೩ರ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟ ಕೀರ್ತಿ ಅವರದು. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿ ಹಲವು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.
ಮೈದಾನದಲ್ಲಿ ಎಂತಹ ಒತ್ತಡದ ಸಂದರ್ಭವಿದ್ದರೂ ಶಾಂತಚಿತ್ತದಿಂದ ನಿರ್ಧಾರ ಕೈಗೊಳ್ಳುವ ಅವರ ಗುಣವೇ ಅವರನ್ನು ‘ಕ್ಯಾಪ್ಟನ್ ಕೂಲ’ ಎಂದು ಪ್ರಸಿದ್ಧಿಗೊಳಿಸಿತು. ಯುವ ಆಟಗಾರರಿಗೆ ಅವಕಾಶ ನೀಡುವುದು, ತಂಡದ ಹಿತಕ್ಕೆ ಆದ್ಯತೆ ನೀಡುವುದು ಮತ್ತು ಕೊನೆಯ ಕ್ಷಣದವರೆಗೂ ಗೆಲುವಿಗಾಗಿ ಹೋರಾಡುವುದು ಅವರ ವ್ಯಕ್ತಿತ್ವದ ವಿಶೇಷತೆಗಳಾಗಿವೆ. ಅವರ ಆಟ ಹಾಗೂ ನಾಯಕತ್ವದ ತಂತ್ರಗಳು ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಮಾದರಿಯಾಗಲಿವೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ




